
ಲಕ್ನೋ: ತಾಯಿ ತೀರಿಹೋಗಿ 2 ದಿನ ಕಳೆದರು ಆಕೆಯ ಕಂದಮ್ಮ ಶವದೊಂದಿಗೆ ಕಾಲಕಳೆದಿರುವ ಮನಕಲಕುವ ಘಟನೆ ನಡೆದಿದೆ.
ಸರಸ್ವತಿ ರಾಜೇಶ್ ಕುಮಾರ್ (29) ಮೃತಮಹಿಳೆಯಾಗಿದ್ದಾರೆ. ಪಿಂಪ್ರಿ ಚಿಚ್ವಾಡದ ಬಾಡಿಗೆ ಮನೆಯಲ್ಲಿ ಸರಸ್ವತಿ ಅಸುನೀಗಿದ್ದರು. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಕೆಯ ಗಂಡು ಮಗು ದೇಹದ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂದಿದೆ.
ಸರಸ್ವತಿ ಮೃತಳಾಗಿರುವ ವಿಚಾರ ಬಂಧುಗಳಿಗೆ ಗೊತ್ತಾದರೂ ಅವರಿಗೆ ಕೊರೊನಾ ಭಯ ಕಾಡಿತ್ತು. ಹೀಗಾಗಿ ಅವರ ಹತ್ತಿರ ಯಾರು ಸುಳಿಲೇ ಇಲ್ಲ. ಕೊನೆಗೆ ಆ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ತಾಯಿ ಮೃತದೇಹದ ಬಳಿ ಹಸಿವಿನಿಂದ ನರಳುತ್ತಿದ್ದ ಮಗುವೊಂದು ಇತ್ತು.
ಕೊರೊನಾ ಭಯದಿಂದ ಆ ಮಗುವಿನ್ನು ಯಾರು ಮುಟ್ಟಲಿಲ್ಲ. ಕೊನೆಗೆ ಪೊಲೀಸ್ ಪೇದೆ ಸುಶೀಲಾ ಹಾಗೂ ರೇಖಾ ಮಗುವನ್ನು ಎತ್ತಿಕೊಂಡು ಹಾಲು ನೀಡಿದರು. ಮಗು ಆರೋಗ್ಯಾವಿದೆ. ಮಗುವಿಗೆ ಕೋವಿಡ್ ವರದಿ ನೆಗಿಟಿವ್ ಬಂದಿದೆ. ಸರಸ್ವತಿ ಸಾವಿಗೆ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ. ಸರಸ್ವತಿ ಪತಿ ಘಟನೆ ನಡೆದಾಗ ಉತ್ತರ ಪ್ರದೇಶಕ್ಕೆ ಹೋಗಿದ್ದರು ಎನ್ನಲಾಗುತ್ತಿದೆ.
Comments are closed.