
ಭೋಪಾಲ್: ಪಿಪಿಇ ಕಿಟ್ ಧರಿಸಿ ಮಧ್ಯಪ್ರದೇಶದ ರತ್ಲಮ್ ನಿವಾಸಿಗಳಾದ ವಧು, ವರರು ವಿವಾಹವಾದ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ವರನಿಗೆ ಕೋವಿಡ್ ಸೋಂಕು ತಗುಲಿದ್ದ ಕಾರಣ ವಧು ಮತ್ತು ವರ ಪಿಪಿಇ ಕಿಟ್ ಧರಿಸಿ ಮದುವೆಯಾಗಿದ್ದಾರೆ. ಇಬ್ಬರು ಅಗ್ನಿಕುಂಡವನ್ನು ಸುತ್ತುತ್ತಿರುವ ಫೋಟೋ ಮತ್ತು ವೀಡಿಯೋಗಳು ಸಖತ್ವೈರಲ್ ಆಗಿವೆ.
#WATCH | Madhya Pradesh: A couple in Ratlam tied the knot wearing PPE kits as the groom is #COVID19 positive, yesterday. pic.twitter.com/mXlUK2baUh
— ANI (@ANI) April 26, 2021
ಏಪ್ರಿಲ್ 19 ರಂದು ಇವರ ವಿವಾಹ ನಿಗಧಿಯಾಗಿತ್ತು. ವರನಿಗೆ ಸೋಂಕು ದೃಢಪಟ್ಟಿತ್ತು. ಮದುವೆಯನ್ನು ಮುಂದೂಡುವಂತೆಯೂ ಇರಲಿಲ್ಲ, ಹೀಗಾಗಿ ಸ್ಥಳೀಯರು ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಈ ಜೋಡಿ ವಿವಾಹವಾಗಿದೆ. ನಾವು ಒಪ್ಪಿಗೆ ಕೊಡಲೇಬೇಕಾಯಿತ್ತು. ಪಿಪಿಇ ಕಿಟ್ ಧರಿಸಿ ಕೊರೊನಾ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮದುವೆಯಾಗಬೇಕು ಎಂದು ಷರತ್ತು ವಿಧಿಸಿದ್ದೇವು. ಈ ಷರತ್ತಿನಂತೆ ಜೋಡಿ ಮದುವೆಯಾಗಿದ್ದಾರೆ ಎಂದು ರತ್ಲಮ್ನ ತಹಸೀಲ್ದಾರ್ ಹೇಳಿದ್ದಾರೆ.
ಮದುವೆಗೆ ಬರುವ ಅತಿಥಿಗಳ ಸಂಖ್ಯೆಯನ್ನು 10ಕ್ಕೆ ಮಿತಿಗೊಳಿಸಿ ಕೊರೊನಾ ನಿಯಮವನ್ನು ಪಾಲಿಸಿ ಮದುವೆಯಾದರೆ ನಾನು ನನ್ನ ಮನೆಯಲ್ಲಿ ಅವರಿಗೆ ಔತಣ ಕೂಟ ಏರ್ಪಡಿಸುತ್ತೇನೆ. ಮದುವೆಯಾದ ಜೋಡಿಗೆ ವಿಶೇಷ ಗಿಫ್ಟ್ ನೀಡುವುದಾಗಿ ಭೀಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.
Comments are closed.