
ಲಖನೌ: ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಹಾಗೂ ಸಹಚರರ ಎನ್ ಕೌಂಟರ್ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ಕ್ಲೀನ್ ಚಿಟ್ ದೊರೆತಿದೆ.
ತ್ರಿಸದಸ್ಯ ವಿಚಾರಣಾ ಆಯೋಗ ಎನ್ ಕೌಂಟರ್ ಬಗ್ಗೆ ತನಿಖೆ ನಡೆಸಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಬಿಎಸ್ ಚೌವ್ಹಾಣ್ ನೇತೃತ್ವದಲ್ಲಿ, ಅಲ್ಲಾಹಾಬಾದ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಶಿ ಕಾಂತ್ ಅಗರ್ವಾಲ್ ಹಾಗೂ ಉತ್ತರ ಪ್ರದೇಶದ ಮಾಜಿ ಡಿಜಿ ಕೆಎಲ್ ಗುಪ್ತಾ ತ್ರಿಸದಸ್ಯ ಸಮಿತಿಯ ಆಯೋಗದಲ್ಲಿದ್ದರು
ಸಮಿತಿ ರಚನೆಯಾದ 8 ತಿಂಗಳ ಬಳಿಕ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. “ಸಮಿತಿ ತನ್ನ ವರದಿಯನ್ನು ಸಲ್ಲಿಸಿದ್ದು, ಅದರ ಪ್ರತಿಯನ್ನು ಸುಪ್ರೀಂ ಕೋರ್ಟ್ ಗೂ ಸಲ್ಲಿಕೆ ಮಾಡಲಾಗುವುದು ಎಂದು ಗುಪ್ತ ತಿಳಿಸಿದ್ದಾರೆ.
Comments are closed.