ಕುಂದಾಪುರ: ತಾಲೂಕಿನ ಅಂಪಾರು ಸಮೀಪದ ನೆಲ್ಲಿಕಟ್ಟೆ ಕತ್ಕೊಡು ಎಂಬಲ್ಲಿ ದ.ಸಂ.ಸ ಭೀಮಘರ್ಜನೆಯ ನಮ್ಮ ಭೂಮಿ ನಮ್ಮ ಹೋರಾಟ ಮತ್ತು ನೂತನ ಗ್ರಾಮ ಶಾಖೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ನೀಲಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಬಳಿಕ ಗ್ರಾಮ ಶಾಖೆಯ ಪದಾಧಿಕಾರಿಯನ್ನ ಆಯ್ಕೆ ಮಾಡಿ ಸಂಘಟನೆಯ ಧ್ವಜವನ್ನ ಅವರಿಗೆ ಹಸ್ತಾಂತರಿಸಿ ಪ್ರಮಾಣ ವಚನ ನೀಡಿ ಮಾತನಾಡಿದ ಅವರು, ಮನೆ-ಮನೆಯಲ್ಲೂ ಬಾಬಾ ಸಾಹೇಬ್ ಅವರ ಹೋರಾಟ ದ ಕ್ರಾಂತಿ ಜ್ಯೋತಿ ಬೆಳಗಬೇಕು. ಆ ಮೂಲಕ ಈ ಭಾಗದಲ್ಲಿ ಒತ್ತುವರಿಯಾದ ದಲಿತರಭೂಮಿಯನ್ನ ಕಾನೂನು ಮೂಲಕ ಮರಳಿಪಡೆಯಬೇಕು ಎಂದರು.
ಮುಖ್ಯ ಅಥಿತಿಯಾಗಿ ಸಂಘಟನೆಯ ಕಲಾ ಮಂಡಳಿಯ ವಸಂತ ವಂಡ್ಸೆ ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಕ್ರಾಂತಿ ಗೀತೆ ಹಾಡಿ ಮಾತಾಡಿದರು.
ಮುಖ್ಯ ಅಥಿಗಳಾಗಿ ಸಂಘಟನೆಯ ಚಂದ್ರಮ ತಲ್ಲೂರು, ರತ್ನಾಕರ ಕುಂದಾಪುರ, ಸುರೇಶ್ ಬಾಬು,ಗುರು ಜನ್ಸಾಲೆ, ರಾಮ ಬೆಳ್ಳಾಲ ಹಾಗೂ ನೂತನ ಶಾಖೆಯ ಸಂಚಾಲಕರಾದ ಗುರುರಾಜ ಕತ್ಕೂಡು, ಸಂಘಟನ ಸಂಚಾಲಕರಾದ ಉದಯ್, ಜಯಕರ, ನಾಗರಾಜ, ಜಯರಾಮ, ವಿಜಯ, ನಾಗರಾಜ, ಖಜಾಂಚಿಯಾಗಿ ಚೈತ್ರ, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಮಹೇಶ್, ಅಣ್ಣಪ್ಪ, ಸುರೇಶ್, ಸಂತೋಷ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗುರುರಾಜ್ ಸ್ವಾಗತಿಸಿ, ನಿರೂಪಿಸಿದರು.
Comments are closed.