ರಾಷ್ಟ್ರೀಯ

ದೇಶವನ್ನು ಲೂಟಿ ಮಾಡಿ ತಿನ್ನುತ್ತಿರುವ ಮೋದಿ, ನೀನು ಸತ್ತು ಹೋಗು: ಹೋರಾಟನಿರತ ಮಹಿಳಾ ತಂಡದ ಘೋಷಣೆಯ ವೀಡಿಯೋ ಹಂಚಿಕೊಂಡ ಬಿಜೆಪಿ ಐಟಿ ಸೆಲ್​ನ ಮುಖ್ಯಸ್ಥ

Pinterest LinkedIn Tumblr


ನವದೆಹಲಿ: ರೈತ ಹೋರಾಟ ದಿನೇದಿನೆ ಯಾವ ರೀತಿಯ ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದೆ ಎನ್ನುವುದನ್ನು ಪೂರ್ತಿ ವಿಶ್ವವೇ ಗಮನಿಸುತ್ತಿದೆ. ಒಂದತ್ತ ನಿಜವಾದ ರೈತರು ನ್ಯಾಯ ಬೇಕೆಂದು ಹೋರಾಡುತ್ತಿದ್ದರೆ ಇನ್ನೊಂದತ್ತ ಕೆಲ ಸಂಘಟನೆಗಳು ಕೇವಲ ಕೇಂದ್ರ ಸರ್ಕಾರವನ್ನು ವಿರೋಧಿಸುವ ನಿಟ್ಟಿನಲ್ಲಿ ಮಾತ್ರವೇ ಹೋರಾಟದ ಹಾದಿಯಲ್ಲಿ ತೊಡಗಿಸಿಕೊಂಡಿವೆ. ಇದಕ್ಕೆ ನಿದರ್ಶನವೆನ್ನುವಂತೆ ಮಹಿಳಾ ಹೋರಾಟಗಾರ್ತಿಯರ ತಂಡವೊಂದು ಕಾಣಿಸಿಕೊಂಡಿದೆ.

‘ಮೋದಿ ಮರ್​ ಜಾ ತೂ.. ದೇಶವನ್ನು ಲೂಟಿ ಮಾಡಿ ತಿನ್ನುತ್ತಿರುವ ಮೋದಿ, ನೀನು ಸತ್ತು ಹೋಗು… ರೈಲನ್ನು ಮಾರಿಕೊಂಡು ತಿನ್ನುತ್ತಿರುವ ಮೋದಿ, ನೀನು ಸತ್ತು ಹೋಗು’ ಇದು ಆ ಹೋರಾಟನಿರತ ಮಹಿಳಾ ತಂಡದ ಘೋಷಣೆಗಳು. ದೇಶದ ಪ್ರಧಾನಿಗೆ ಸತ್ತು ಹೋಗು ಎಂದು ಘೋಷಣೆ ಕೂಗುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.

ಬಿಜೆಪಿ ಐಟಿ ಸೆಲ್​ನ ಮುಖ್ಯಸ್ಥ ಅಮಿತ್​ ಮಾಲ್ವಿಯಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಮ್ಯುನಿಷ್ಟರು ಮಾಡಲು ಸಾಧ್ಯವಿರುವುದು ಇದನ್ನೇ? ಎಂದು ಅವರು ಪ್ರಶ್ನೆ ಕೇಳಿದ್ದಾರೆ.

ರೈತ ಹೋರಾಟವನ್ನು ನಕ್ಸಲರು ಮತ್ತು ಮಾವೋವಾದಿಗಳು ಹೈಜ್ಯಾಕ್​ ಮಾಡಿದ್ದಾಗಿ ಈ ಹಿಂದೆ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಅವರು ಹೇಳಿದ್ದರು. ಒಮ್ಮೆ ಈ ಹೈಜ್ಯಾಕ್​ನಿಂದ ರೈತರು ಹೊರಗೆ ಬಂದರೆ ಅವರಿಗೆ ಕೃಷಿ ಕಾಯ್ದೆ ಅರ್ಥವಾಗುತ್ತದೆ ಎಂದು ಅವರು ತಿಳಿಸಿದ್ದರು.

Comments are closed.