ರಾಷ್ಟ್ರೀಯ

ಒಂದೇ ವಿವಾಹ ಸಮಾರಂಭದಲ್ಲಿ ಅಮ್ಮ, ಮಗಳ ವಿವಾಹ!

Pinterest LinkedIn Tumblr


ಲಖನೌ: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಒಂದೇ ವಿವಾಹ ಸಮಾರಂಭದಲ್ಲಿ  ಅಮ್ಮ, ಮಗಳ ವಿವಾಹವನ್ನು ಮಾಡಿಕೊಂಡಿದ್ದಾರೆ.

53 ವರ್ಷದ ಮಹಿಳೆ ಮತ್ತು ಅವರ 27 ವರ್ಷದ ಮಗಳು ತಮ್ಮ ಇನಿಯನ ಜೊತೆ ಒಂದೇ ‘ಮಂಟಪ’ದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಗೋರಖ್‌ಪುರದ ಪಿಪ್ರೌಲಿ ಬ್ಲಾಕ್‌ನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಯಿ ಮತ್ತು ಮಗಳು ಇಬ್ಬರೂ ಒಂದೇ ಸಮಯದಲ್ಲಿ ವಿವಾಹವಾದರು.

ವಿಧವೆ ಮಹಿಳೆ ತನ್ನ ಗಂಡನ ಕಿರಿಯ ಸಹೋದರನನ್ನು ಮದುವೆಯಾದರು. 63 ದಂಪತಿಗಳ ಪೈಕಿ ಈ ದಂಪತಿಯೂ ಒಬ್ಬರಾಗಿದ್ದಾರೆ. ಇನ್ನು ಇದೇ ವೇಳೆ ಹಲವು ಮುಸ್ಲಿಂ ದಂಪತಿಗಳು ಸತಿಪತಿಗಳಾಗಿದ್ದಾರೆ. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಬಿಡಿಒ ಡಾ ಸಿ.ಎಸ್ ಕುಶ್ವಾಹ ಸತ್ಯಪಾಲ್ ಸಿಂಗ್ ಮತ್ತು ಇನ್ನೊಬ್ಬ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೇಲಿ ದೇವಿ ಅವರು ಹರಿಹರ್ ಅವರನ್ನು ವಿವಾಹವಾಗಿದ್ದರು. ಅವರಿಂದ ಬೇಲಿ ದೇವಿ ಮೂವರು ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದರು. ಆದರೆ 25 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದರು. ಈಗ, ಕಿರಿಯ ಮಗಳು ಇಂದೂ ಹೊರತುಪಡಿಸಿ ಅವಳ ಎಲ್ಲಾ ಮಕ್ಕಳು ಮದುವೆಯಾಗಿ ತಮ್ಮ ಕುಟುಂಬಗಳೊಂದಿಗೆ ನೆಲೆಸಿದ್ದರಿಂದ, ಬೇಲಿ ದೇವಿ ತನ್ನ ಉಳಿದ ಜೀವನವನ್ನು ತನ್ನ ಸೋದರ ಮಾವ 55 ವರ್ಷದ ಜಗದೀಶ್ ಜೊತೆ ಇರಲು ಇಚ್ಛಿಸಿ ವಿವಾಹವಾಗಿದ್ದಾರೆ. ಇನ್ನು 27 ವರ್ಷದ ಇಂದೂ ಸಹ ಅದೇ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.

“ರೈತ ಜಗದೀಶ್ ಅವಿವಾಹಿತರಾಗಿದ್ದಾರೆ. ಇನ್ನು ನನ್ನ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಈಗಾಗಲೇ ಮದುವೆಯಾಗಿದ್ದಾರೆ. ನನ್ನ ಕಿರಿಯ ಮಗಳ ವಿವಾಹದೊಂದಿಗೆ, ನನ್ನ ದಿವಾರ್ (ಗಂಡನ ಕಿರಿಯ ಸಹೋದರ)ನನ್ನು ಮದುವೆಯಾಗಲು ನಿರ್ಧರಿಸಿದೆ. ನನ್ನ ಎಲ್ಲಾ ಮಕ್ಕಳು ಸಂತೋಷವಾಗಿದ್ದಾರೆ ಎಂದು ಬೇಲಿ ದೇವಿ ತಮ್ಮ ಹೊಸ ಜೀವನದ ಅಧ್ಯಾಯವನ್ನು ಪ್ರಾರಂಭಿಸುವ ಮೊದಲು ಸಂತೋಷದ ಹೊಳಪಿನಿಂದ ಹೇಳಿದರು.

ಇಂದೂ 29 ವರ್ಷದ ರಾಹುಲ್ ಅವರನ್ನು ವಿವಾಹವಾಗಿದ್ದಾರೆ. “ನನ್ನ ತಾಯಿಯ ಮದುವೆ ವಿಚಾರವಾಗಿ ನನ್ನ ಒಡಹುಟ್ಟಿದವರಲ್ಲಿ ಯಾರಿಗೂ ತಿರಸ್ಕಾರವಿಲ್ಲ. ನನ್ನ ತಾಯಿ ಮತ್ತು ಚಿಕ್ಕಪ್ಪ ನಮ್ಮನ್ನು ನೋಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಆಸರೆಯಾಗಿ ಒಟ್ಟಾಗಿರುವುದಕ್ಕೆ ನಮಗೆ ಈಗ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

Comments are closed.