ಉಡುಪಿ: ಉಡುಪಿ ಜಿಲ್ಲೆ ಕಾರ್ಕಳ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಇಂದು (ಮಂಗಳವಾರ) ಚುನಾವಣೆ ನಡೆದಿದ್ದು ಕುತೂಹಲ ಕೆರಳಿಸಿದ್ದ ಈ ಪ್ರಕ್ರಿಯೆಯಲ್ಲಿ ಕೊನೆಗೂ ಬಿಜೆಪಿ ಬೆಂಬಲಿತರಿಬ್ಬರು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಅಧ್ಯಕ್ಷೆಯಾಗಿ ಸುಮಾ ಕೇಶವ್ ಹಾಗೂ ಉಪಾಧ್ಯಕ್ಷರಾಗಿ ಪಲ್ಲವಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಹನ್ನೊಂದು ಮಂದಿ ಸಂಖ್ಯಾ ಬಲ ಹೊಂದಿದ್ದು ಇಂದಿನ ಚುನಾವಣೆ ಬಾರೀ ಕುತೂಹಲಕ್ಕೆಡೆ ಮಾಡಿತ್ತು. ಆದರೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಸಂಸದೆ ಹಾಗೂ ಸ್ಥಳಿಯ ಶಾಸಕರಿಗೆ ಮತ ಚಲಾವಣೆ ಅವಕಾಶವಿತ್ತು. ಅದರಂತೆಯೇ ಉಡುಪಿ ಚಿಕ್ಕಮಗಳುರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಆಗಮನ ಮತ್ತು ಮತದಾನ ಬಿಜೆಪಿ ಗೆಲುವಿಗೆ ಕಾರಣವಾಗಿದೆ.
Comments are closed.