ಕರಾವಳಿ

ಸೂಫಿಬ್ಯಾರಿಯ ಝಕಾತ್ ಯಾತ್ರೆ ಕಥೆ ಆಧಾರಿತ “ಮುಸಾಫಿರ್” ಸಿನಿಮಾ ಚಿತ್ರೀಕರಣಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು/ ಉಳ್ಳಾಲ ಅಕ್ಟೋಬರ್.27: ಶ್ಯಾಕ್ಸ್ ಎಂಟರ್‌ಪ್ರೈಸಸ್‌ನ ಡಾ. ಅಬ್ದುಲ್ ಶಕೀಲ್ ನಿರ್ಮಾಣದ, ಮಂಜುನಾಥ್ ಸಾಗರ್ ನಿರ್ದೇಶನದ “ಮುಸಾಫಿರ್” ಸಿನೆಮಾದ ಚಿತ್ರೀಕರಣಕ್ಕೆ ಮಂಗಳವಾರ ಇನ್ನೋಳಿಯಲ್ಲಿ ಚಾಲನೆ ನೀಡಲಾಯಿತು.

ಕೊಣಾಜೆ ಠಾಣೆಯ ಎಸ್ಸೈ ಯೋಗೀಶ್ವರನ್ ಕ್ಲ್ಯಾಪಿಂಗ್ ಹಾಗೂ ಮಂಗಳೂರು ತಾಪಂ‌ ಅಧ್ಯಕ್ಷ ಮುಹಮ್ಮದ್ ಮೋನು ಕ್ಯಾಮರಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನ್ಯಾಶನಲ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ರಮೀಝ್ ಮಿಝ್, ಗ್ರಾಪಂ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಇನೋಳಿ, ಎಂಟಿ ಫಿರೋಝ್, ಪಾವೂರು ಗ್ರಾಪಂ ಮಾಜಿ ಉಪಾಧ್ಯಕ್ಷರಾದ ವಲೇರಿಯನ್ ಡಿಸೋಜ, ಲೀಲಾವತಿ, ಮಂಗಳೂರು ತಾಪಂ‌ ಮಾಜಿ ಸದಸ್ಯ ಮುಸ್ತಫಾ ‌ಪಾವೂರು, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಪಾವೂರು ಗ್ರಾಪಂ‌‌‌ ಮಾಜಿ ಸದಸ್ಯರಾದ ವಿವೇಕ ರೈ ಶುಭಹಾರೈಸಿದರು.

ಚಿತ್ರನಟರಾದ ಪರಮಾನಂದ ಸಾಲ್ಯಾನ್, ಅಶೋಕ್ ಕುಮಾರ್ ಕಾಸರಗೋಡು, ಅರ್ಶನ್ ಉಳ್ಳಾಲ್, ಉದ್ಯಮಿ‌ ಇಕ್ಬಾಲ್ ದೇರ್ಲಕಟ್ಟೆ, ಪಾವೂರು ಗ್ರಾಪಂ ಮಾಜಿ ಸದಸ್ಯರಾದ ಮುಹಮ್ಮದ್‌ ಬದ್ರಿಯಾನಗರ, ಮುಹಮ್ಮದ್ ಚಕ್ಕರ್ ಮೋನು, ನಾಸಿರ್ ಮಲಾರ್, ಸ್ಥಳೀಯ ಪ್ರಮುಖರಾದ ಹುಸೈನಾಕ ಕಡವು, ಅಬೂಬಕ್ಕರ್ ಇನೋಳಿ, ಉಸ್ಮಾನ್ ಇನೋಳಿ, ಶಬ್ಬೀರ್ ಇನೋಳಿ, ಅಮೀರ್ ಇನೋಳಿ, ಕೆಎಂ ಹನೀಫ್, ಎಂಪಿ ಹನೀಫ್, ಪತ್ರಕರ್ತ ಆರೀಫ್ ಕಲ್ಕಟ್ಟ ಉಪಸ್ಥಿತರಿದ್ದರು.

ಪತ್ರಕರ್ತ ಹಂಝ ಮಲಾರ್ ಅವರ “ಸೂಫಿಬ್ಯಾರಿಯ ಝಕಾತ್ ಯಾತ್ರೆ” ಕಥೆ ಆಧಾರಿತ “ಮುಸಾಫಿರ್” ಚಲನಚಿತ್ರಕ್ಕೆ ಮಂಜುನಾಥ್ ಪಾಂಡವಪುರ ತಾಂತ್ರಿಕ‌‌ ನಿರ್ದೇಶನ ನೀಡಿದ್ದಾರೆ. ಮುರಳೀಧರ್ ಸಹಾಯಕ ನಿರ್ದೇಶಕರಾಗಿ ಸಹಕರಿಸಿದ್ದಾರೆ.

Comments are closed.