ರಾಷ್ಟ್ರೀಯ

ಉತ್ತರ ಪ್ರದೇಶದ ರೋಡದಲ್ಲಿ ವೃದ್ಧ ದಲಿತ ವ್ಯಕ್ತಿಗೆ ಮೂತ್ರ ಕುಡಿಸಿ ಹಲ್ಲೆ ಮಾಡಿದ ದುಷ್ಕರ್ಮಿಗಳು

Pinterest LinkedIn Tumblr

ಲಲಿತ್ ಪುರ(ಉತ್ತರಪ್ರದೇಶ): ದೇಶದಲ್ಲಿ ಅಮಾನವೀಯ, ಪೈಶಾಚಿಕ ಘಟನೆಗಳು ನಡೆಯುತ್ತಲೇ ಇದ್ದು, ದಿನ ಬೆಳಗಾದರೆ ಇಂಥ ಘಟನೆಗಳು ಒಂದರ ಮೇಲೊಂದರಂತೆ ಬೆಳಕಿಗೆ ಬರುತ್ತಿದೆ. ಉತ್ತರ ಪ್ರದೇಶದ ರೋಡ ಗ್ರಾಮದಲ್ಲಿ 65 ವರ್ಷದ ದಲಿತ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಅವರಿಗೆ ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ಈಗ ವರದಿಯಾಗಿದೆ.

ಸೋನು ಯಾದವ್‌ ಎನ್ನುವವ ವೃದ್ಧ ವ್ಯಕ್ತಿಗೆ ಮೂತ್ರ ಕೂಡಿಸಿ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವು ದಿನಗಳ ಹಿಂದೆ ಸೋನು ಯಾದವ್‌ ವೃದ್ಧ ವ್ಯಕ್ತಿಯ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸೋನು ಯಾದವ್‌ ಆ ಕುಟುಂಬದವರಿಗೆ ದೂರು ವಾಪಾಸು ಪಡೆಯುವಂತೆ ಒತ್ತಡ ಹಾಕಿದ್ದ.

ಸೋನು ಯಾದವ್‌ ಬೆದರಿಕೆ ಹಾಗೂ ಒತ್ತಡಕ್ಕೆ ಮಣಿಯದಿದ್ದಾಗ ಬಲವಂತವಾಗಿ ಮೂತ್ರ ಕುಡಿಸಿ, ಕಟ್ಟಿಗೆಯಿಂದ ಹಲ್ಲೆ ಮಾಡಲಾಯಿತು ಎಂದು ವೃದ್ಧ ವ್ಯಕ್ತಿ ತಿಳಿಸಿದ್ದಾರೆ.

ರೋಡ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಗಳು ಇಬ್ಬರು ದಲಿತರ ಮೇಲೆ ಹಲ್ಲೆ ಮಾಡಿರುವುದು ತಿಳಿದುಬಂದಿದೆ. ಈಗಾಗಲೇ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಉಳಿದವರ ಪತ್ತಗೆ ಕ್ರಮಕೈಗೊಳ್ಳಲಾಗಿದೆ. ನಾವು ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಲಲಿತ್‌ಪುರದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮಿರ್ಜಾ ಬೇಗ್‌ ತಿಳಿಸಿದ್ದಾರೆ.

Comments are closed.