ಕರ್ನಾಟಕ

ಪ್ರಿಯಕರನೊಂದಿಗೆ ರಾ#ಸಲೀಲೆಯಲ್ಲಿ ತೊಡಗಿದ್ದ ವೇಳೆ ಗಂಡನ ಕೈಗೆ ಸಿಕ್ಕಿಹಾಕಿಕೊಂಡ ಪತ್ನಿ; ಮುಂದೆ ಆಗಿದ್ದು ಮಾತ್ರ ಭಯಾನಕ ಕೃತ್ಯ !

Pinterest LinkedIn Tumblr

ಚಾಮರಾಜನಗರ: ಪ್ರಿಯಕರನೊಂದಿಗೆ ರಾ#ಸಲೀಲೆಯಲ್ಲಿ ತೊಡಗಿದ್ದ ವೇಳೆ ಕಣ್ಣಾರೆ ಕಂಡ ಪತಿಯನ್ನು ಕೊಂದ ಪತ್ನಿ, ಕೊನೆಗೆ ಕಾಣೆಯಾಗಿದ್ದಾರೆ ಎಂದು ನಾಟಕವಾಡಿ ಸಿಕ್ಕಿಬಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ರಾಘವಪುರ ಗ್ರಾಮದ ನಾಗರಾಜನಾಯ್ಕ (40) ಮೃತ ವ್ಯಕ್ತಿ. ಹೆಂಡತಿ ಪದ್ಮಾ (26) ಹಾಗೂ ಈಕೆಯ ಪ್ರಿಯಕರ ಮಣಿಕಂಠ (26) ನನ್ನು ಪ್ರಕರಣ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಸೆಪ್ಟೆಂಬರ್ 11ರ ಮಧ್ಯರಾತ್ರಿ ತೊಂಡವಾಡಿ ಜಮೀನೊಂದರಲ್ಲಿ ರಾ#ಸಲೀಲೆ ಆಡುತ್ತಿದ್ದ ವೇಳೆ ಗಂಡನ ಕೈಗೆ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಪ್ರಿಯಕರನ ಜೊತೆಗೂಡಿ ಕಲ್ಲಿನಲ್ಲಿ ಹೊಡೆದು ಕೊಂದು ನಾಗರಾಜನಾಯ್ಕನನ್ನು ಕಳಲೆ ಕಾಲುವೆಗೆ ಬಿಸಾಡಿದ್ದಾರೆ. ಆ ಬಳಿಕ ಮೈಸೂರಿಗೆ ತೆರಳುತ್ತೇನೆಂದು ಹೋದವರು ಇನ್ನೂ ಬಂದಿಲ್ಲ ಎಂದು ಆರೋಪಿಗಳಿಬ್ಬರು ಸೆ.16ರಂದು ಬೇಗೂರು ಠಾಣೆಗೆ ದೂರು ನೀಡಿದ್ದಾರೆ.

ಪದ್ಮಾ ಮಾತಿನಲ್ಲಿ ಕಪಟ ಇರುವುದನ್ನು ಗುರುತಿಸಿದ ಪೊಲೀಸರು, ಹೆಚ್ಚಿನ ವಿಚಾರಣೆ ಕೈಗೊಂಡಾಗ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳು ಶವವನ್ನು ಎಸೆದಿದ್ದೇವೆ ಎಂದು ಹೇಳಿರುವುದರಿಂದ ಪೊಲೀಸರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರ್ ನಡೆಸಿದ್ದಾರೆ.

ಬೇಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು,ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments are closed.