
ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಉಪ ರಾಷ್ಟ್ರಪತಿ ಕಚೇರಿ ತಿಳಿಸಿದೆ.
ಮಂಗಳವಾರ ಬೆಳಗ್ಗೆ ಕೊರೋನಾ ಪರೀಕ್ಷೆಗೆ ಒಳಗಾದ ಅವರ ವರದಿ ಪಾಸಿಟಿವ್ ಬಂದಿದೆ.ಅದಾಗ್ಯೂ ಅವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಅವರ ಆರೋಗ್ಯ ಉತ್ತಮವಾಗಿದೆ. ಅವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಲಾಗಿದೆ. ಅವರ ಹೆಂಡತಿ ಉಷಾ ನಾಯ್ಡು ಅವರ ಕೊರೋನಾ ಪರೀಕ್ಷೆ ನೆಗಟಿವ್ ಬಂದಿದ್ದರೂ, ಅವರು ಕೂಡ ಸೆಲ್ಫ್ ಐಸೋಲೇಷನ್ಗೆ ಒಳಗಾಗಿದ್ದಾರೆ.
ರಾಜ್ಯಸಭಾ ಸದಸ್ಯರು ಆಗಿರುವ 71 ವರ್ಷದ ವೆಂಕಯ್ಯ ನಾಯ್ಡು ಅವರು, ಕಳೆದ ವಾರ ನಡೆದ ಮುಂಗಾರು ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿದ್ದರು. 25ಕ್ಕೂ ಹೆಚ್ಚಿನ ಸಂಸದರು ಕೊರೋನಾ ಸೋಂಕಿಗೆ ಒಳಗಾದ ಹಿನ್ನಲೆ ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ.
Comments are closed.