
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಪರಿಶೀಲನೆ ಮಾಡುವ ವೇಳೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬ್ಯಾಗ್ನಲ್ಲಿ ಪಿಸ್ತೂಲ್ ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಸಿಐಎಸ್ಎಫ್ ಭದ್ರತಾ ಪರಿಶೀಲನೆಯ ಸಮಯದಲ್ಲಿ, ಪಿಸ್ತೂಲ್ ಅನ್ನು ಚೀಲದಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಗೋವಾಕ್ಕೆ ತೆರಳುವ ವಿಮಾನ ಹತ್ತಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಸ್ನೋಟಿಕರ್ ಅವರನ್ನು ಸಿಬ್ಬಂದಿಗಳು ಪರಿಶೀಲಿಸಿದಾಗ ಪಿಸ್ತೂಲ್ ಸಿಕ್ಕಿದೆ.
ಘಟನೆಯನಂತರ ಸಿಐಎಸ್ಎಫ್ ಸಿಬ್ಬಂದಿ ಅಸ್ನೋಟಿಕರ್ ಅವರನ್ನು ವಶಕ್ಕೆ ತೆಗೆದುಕೊಂಡರು ಮತ್ತು ತನಿಖೆ ಕೈಗೊಂಡಿದ್ದಾರೆ.
ಮಾಜಿ ಸಚಿವ ಅಸ್ನೋಟಿಕರ್ ಭದ್ರತಾ ಸಿಬ್ಬಂದಿಗೆ ತಮ್ಮಬಳಿ ಪಿಸ್ತೂಲಿನ ಪರವಾನಗಿ ಇರುವುದಾಗಿ ತಿಳಿಸಿದ್ದಾರೆ. ತಾನೊಬ್ಬ ಉದ್ಯಮಿಯಾಗಿದ್ದು ಆತ್ಮರಕ್ಷಣೆಗಾಗಿ ಪಿಸ್ತೂಲನ್ನು ಇರಿಸಿಕೊಂಡಿದ್ದಾಗಿ ವಿವರಿಸಿದ್ದಾರೆ.
ಆನಂದ್ ಅಸ್ನೋಟಿಕರ್ 2018ರ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲ-ಕಾರವಾರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ವಿರುದ್ಧ ಆನಂದ್ ಸೋತಿದ್ದರು.
Comments are closed.