ಕರಾವಳಿ

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಮಹಿಳೆಯಿಂದ ಬೈಂದೂರು ವ್ಯಕ್ತಿಗೆ 58 ಸಾವಿರ ಪಂಗನಾಮ..!

Pinterest LinkedIn Tumblr

ಉಡುಪಿ: ಸಾಮಾಜಿಕ ಜಾಲತಾಣಗಳ ಮೂಲಕ‌ ಪರಿಚಯ ಮಾಡಿಕೊಂಡು ಹಣ ಲಪಾಟಾಯಿಸುತ್ತಿದ್ದ ಬಗ್ಗೆ ಉಡುಪಿ‌ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಪಗರಕರಣ ದಾಖಲಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯಿಂದಾಗಿ ಕೋಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಒಬ್ಬರು 58 ಸಾವಿರ ಹಣ ಪಂಗನಾಮ‌ ಹಾಕಿಸಿಕೊಂಡಿದ್ದಾರೆ.

ಕಳೆದ 15-20 ದಿನದ ಹಿಂದೆ ಬೆರ್ನಿಟ್ ವಿನ್ಸೆಂಟ್ ಎಂಬಾಕೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ನಾಗೂರು ನಿವಾಸಿ ಬೈಂದೂರಿನ ಪ್ರತಿಷ್ಠಿತ ಕೋಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಒಬ್ಬರರನ್ನು ಪರಿಚಯಿಸಿಕೊಂಡಿದ್ದು ತಾನು ಲಂಡನ್ ಡಬ್ಲೂಎಚ್‌ಒ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದ ಆಕೆ ವಾಟ್ಸ್‌ಅಪ್ ಚಾಟಿಂಗ್ ಮೂಲಕ ಭಾರತಕ್ಕೆ ಬಂದು ಹೂಡಿಕೆ ಮಾಡುವುದಾಗಿ ನಂಬಿಸಿದ್ದಳು.

ಸೆ.15ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ದೆಹಲಿ ಏರ್‌ಪೋರ್ಟ್‌ನ ಅಧಿಕಾರಿ ಎಂದು ಪರಿಚಯಿಸಿಕೊಂಡು ಬೆರ್ನಿಟ್ ಅವರು ಏರ್ಪೋರ್ಟ್ ಗೆ ಬಂದಿದ್ದು ಡಿ.ಡಿ.ಯ ರಿಜಿಸ್ಟ್ರೇಶನ್ ಬಾಬ್ತು 58,800 ರೂ. ದೆಹಲಿಯ ಐಡಿಬಿಐ ಬ್ಯಾಂಕ್‌ನ ಖಾತೆಗೆ ಕೂಡಲೇ ಜಮೆ ಮಾಡುವಂತೆ ತಿಳಿಸಿದ್ದ. ಇದನ್ನು ನಂಬಿದ ವ್ಯಕ್ತಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದು, ಪುನಃ ಕರೆ ಮಾಡಿ ಕೋವಿಡ್ ಟೆಸ್ಟ್‌ಗಾಗಿ 45,500 ರೂ. ಪಾವತಿಸುವಂತೆ ತಿಳಿಸಿದ್ದಾನೆ.

ಇದೊಂದು ಮೋಸದ ಜಾಲ ಎಂಬುದಾಗಿ ಮನವರಿಕೆ ಮಾಡಿಕೊಂಡ ವ್ಯಕ್ತಿ ತನ್ನನ್ನು ನಂಬಿಸಿ, ಮೋಸದಿಂದ ಹಣ ಲಪಟಾಯಿಸಿದ ಇಬ್ಬರು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದಾರೆ.

Comments are closed.