
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಇಂದು (ಬುಧವಾರ) ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ವಿಚಾರಣೆ ಮುಗಿಸಿಕೊಂಡು ಹೊರಬಂದಿದ್ದು, ಸದ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ
ಸತತ ನಾಲ್ಕು ಗಂಟೆಗಳ ಕಾಲ ಸಿಸಿಬಿ ನಡೆಸಿದ ವಿಚಾರಣೆ ಮುಗಿಸಿ ಸ್ಟಾರ್ ದಂಪತಿ ಹೊರ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮತನಾಡಿದ ದಿಗಂತ್ ‘ಇನ್ವೆಸ್ಟಿಗೇಷನ್ ನಡೆಯುತ್ತಿದೆ. ನಾವು ಸಹಕರಿಸುತ್ತಿದ್ದೇವೆ. ಮತ್ತೆ ಅವರು ನಮ್ಮನ್ನ ಕರೆದರೆ ಮತ್ತೊಮ್ಮೆ ಬರುತ್ತೇವೆ. ಧನ್ಯವಾದ’. ಎಂದು ತಿಳಿಸಿದ್ದಾರೆ.
ವಿಚಾರಣೆ ಅಂತ್ಯ ಆಗುವ ಮುನ್ನ ಮಾಧ್ಯಮದವರೊಂದಿಗೆ ಮತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ “ಡ್ರಗ್ಸ್ ಮಾಫಿಯಾ ಪ್ರಕರಣದ ವಿಚಾರಣೆಗೋಸ್ಕರ ನಟ ದಿಗಂತ್ ಮತ್ತು ಐಂದ್ರಿತಾ ರೇ ಯನ್ನು ನಾವು ಕರೆದಿದ್ದೆವು. ಬೆಳಗ್ಗೆಯಿಂದಲೂ ಐಂದ್ರಿತಾ, ದಿಗಂತ್ ವಿಚಾರಣೆ ನಡೆಸಿದ್ದೇವೆ. ವಿಚಾರಣೆಯಲ್ಲಿ ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ಮತ್ತೊಂದು ದಿನಾಂಕ ಗೊತ್ತು ಪಡಿಸಿ ವಿಚಾರಣೆಗೆ ಬರಲು ಸೂಚಿಸಿ ಕಳುಹಿಸುತ್ತೇವೆ” ಎಂದು ತಿಳಿಸಿ ಸ್ಟಾರ್ ದಂಪತಿಯನ್ನು ಮತ್ತೆ ವಿಚಾರಣೆ ನಡೆಸೋ ಬಗ್ಗೆ ಮಾಹಿತಿ ನೀಡಿದ್ದರು.
ಮೊಬೈಲ್ ಮಾಹಿತಿಗಳ ರಿಟ್ರೀವ್ಗಾಗಿ ಸಿಸಿಬಿ ಐಂದ್ರಿತಾ, ದಿಗಂತ್ ಮೊಬೈಲ್ ಸೀಜ್ ಮಾಡಿದೆ. ವಿಚಾರಣೆಗೆ ಹಾಜರಾದಾಗಲೇ ಮೊಬೈಲ್ ವಶಕ್ಕೆ ಪಡೆದಿತ್ತು. ಇದೀಗ ವಿಚಾರಣೆ ಮುಗಿಸಿಕೊಂಡು ತಾರಾ ಜೋಡಿ ಫೋನ್ ಇಲ್ಲದೆ ಮನೆಗೆ ಹೋಗಿದ್ದು, ಇಬ್ಬರ ಮೊಬೈಲ್ಅನ್ನು ವಶಕ್ಕೆ ಪಡೆದು ಸಿಸಿಬಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ.
ಮೊಬೈಲ್ನಲ್ಲಿರುವ ಚಾಟ್ಸ್, ಕಾಲ್ ಡಿಟೇಲ್ಸ್ ಸಂಗ್ರಹಿಸುವ ಸಿಸಿಬಿ. ಮೊಬೈಲ್ ರಿಟ್ರೀವ್ ಆದ ನಂತರ ಮತ್ತೆ ವಿಚಾರಣೆ ನಡೆಸಲು ನಿರ್ಧಾರಿಸಿದೆ.
ಮತ್ತಷ್ಟು ತನಿಖೆಯ ಅಗತ್ಯ ಹಿನ್ನೆಲೆಯಲ್ಲಿ ಮೊಬೈಲ್ಗಳನ್ನು ಸೀಜ್ ಮಾಡಲಾಗಿದ್ದು, ಮೊಬೈಲ್ನಲ್ಲಿ ಸಿಕ್ಕ ಮಾಹಿತಿ ಆಧರಿಸಿ ದಿಗಂತ್, ಐಂದ್ರಿತಾ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
Comments are closed.