
ಲಕ್ನೋ: ಯುವಕನೊಂದಿಗೆ ಮಾತನಾಡಿದಕ್ಕೆ ಪ್ರೇಯಸಿಯನ್ನು ಹತ್ಯೆಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯ ಹಲ್ದೌರ್ ನಲ್ಲಿ ನಡೆದಿದೆ.
ಕಾಜಲ್ ಕೊಲೆಯಾದ ಯುವತಿ. ಕಾಜಲ್ ಪರಿಚಿತ ಯುವಕನೊಂದಿಗೆ ಮಾತನಾಡಿರುವ ವಿಷಯ ಪ್ರಿಯಕರ ಸಲೀಂಗೆ ತಿಳಿದಿದೆ. ಅನುಮಾನಗೊಂಡ ಸಲೀಂ ಯುವತಿಯ ಕತ್ತು ಕೊಯ್ದು ಹೊಲದಲ್ಲಿ ಬಿಸಾಡಿದ್ದಾನೆ.
ದೇಹದ ಮೇಲೆ ಕಾಡು ಪ್ರಾಣಿಗಳು ದಾಳಿ ನಡೆಸಿದ ಪರಿಣಾಮ ದೇಹ, ರುಂಡ, ಕೈ ಕಾಲುಗಳು ಬೇರೆಯಾಗಿ ಗುರುತು ಸಿಗದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸ್ಥಳದಲ್ಲಿ ಪತ್ತೆಯಾದ ಬಟ್ಟೆ ಆಧಾರದ ಮೇಲೆ ಮೃತದೇಹವನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಹಲ್ದೌರ್ ಇಲಾಖೆಯ ಹರದಾಸಪುರ ಗ್ರಾಮದ ವ್ಯಾಪ್ತಿಯಲ್ಲಿ ಕಾಜಲ್ ಮೃತದೇಹ ಸಿಕ್ಕಿತ್ತು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ಇಡೀ ಗ್ರಾಮದ ಜನರೇ ಸೇರಿದ್ದರು. ಪೊಲೀಸರು ಅನುಮಾನದ ಮೇಲೆ ಕಾಜಲ್ ಪ್ರಿಯಕರ ಸಲೀಂನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ಸಲೀಂ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.
ನಾನು ಕಾಜಲ್ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಯುವಕನೋರ್ವನ ಜೊತೆ ಕಾಜಲ್ ಮಾತನಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿತ್ತು. ಇದರಿಂದ ಕಾಜಲ್ ಳನ್ನು ಮಗಿಸಬೇಕೆಂದು ನಿರ್ಧರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರೋದಾಗಿ ಸಲೀಂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
Comments are closed.