ಕರ್ನಾಟಕ

IAS ಅಧಿಕಾರಿಗಳ ಕಿರುಕುಳದಿಂದಾಗಿ ಹುದ್ದೆಗೆ ರಾಜೀನಾಮೆ ನೀಡಿ ರಿಕ್ಷಾ ಓಡಿಸುತ್ತಿರುವ ವೈದ್ಯ!

Pinterest LinkedIn Tumblr

IAS ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ವೈದ್ಯರೊಬ್ಬರು ಸರ್ಕಾರಿ ವೈದ್ಯ ಡಾ.ರವೀಂದ್ರ ವೃತ್ತಿ ಬಿಟ್ಟು ಆಟೋ ಚಾಲನೆ ಮಾಡ್ತಿದ್ದಾರೆ.

ದಾವಣಗೆರೆಯಲ್ಲಿ ವೈದ್ಯ ಆಟೋ ಚಾಲನೆ ಮಾಡಿಕೊಂಡು ಜೀವನ ಮಾಡಬೇಕಾದ ದುಸ್ಥಿತಿಗೆ IAS ಅಧಿಕಾರಿಗಳು ತಳ್ಳಿದ್ದಾರೆ. 24 ವರ್ಷಗಳ ಕಾಲ ಸರ್ಕಾರಿ ವೈದ್ಯನಾಗಿ ಡಾ.ರವೀಂದ್ರ ಸೇವೆ ಮಾಡಿದ್ದರು. ಆದ್ರೆ ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆರ್​ಸಿಹೆಚ್ ಆಗಿ ಮಾಡ್ತಿದ್ದ ಸೇವೆಯನ್ನೇ ಬಿಟ್ಟು ಆಟೋ ಚಾಲನೆಗೆ ಇಳಿದಿದ್ದಾರೆ.

ಬಳ್ಳಾರಿ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರವೀಂದ್ರ ಸೇವೆ ಮಾಡಿದ್ದರು. ವಿನಾಃಕಾರಣ ರವೀಂದ್ರರನ್ನು ಸಸ್ಪೆಂಡ್ ಮಾಡಲಾಗಿತ್ತು. ಕೆಎಟಿ ಕೋರ್ಟ್​ನಲ್ಲಿ ಎರಡು ಬಾರಿ ವೈದ್ಯನ ಪರವಾಗಿ ತೀರ್ಪು ಬಂದ್ರೂ ಸಮಸ್ಯೆ ಬಗೆಹರಿದಿಲ್ಲ.

ಕೋರ್ಟ್​ ಆದೇಶ ಅಧಿಕಾರಿಗಳು ಮತ್ತೆ ಪೋಸ್ಟ್​ ಕೊಟ್ಟಿಲ್ಲ. ಜನವರಿ ತಿಂಗಳಲ್ಲಿ ಪೋಸ್ಟ್ ಕೊಡಿ ಎಂದು ಕೆಎಟಿ ನ್ಯಾಯಾಲಯ ಆದೇಶ ನೀಡಿತ್ತು. ಕಳೆದ 15 ತಿಂಗಳಿನಿಂದ ವೇತನವನ್ನೇ ಆರೋಗ್ಯ ಇಲಾಖೆ ಸತಾಯಿಸುತ್ತಿದೆ.

ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಿಗೂ IAS ಅಧಿಕಾರಿಗಳ ದುರಾಡಳಿತದ ಬಗ್ಗೆ ಡಾ.ರವೀಂದ್ರ ಪತ್ರ ಬರೆದಿದ್ದಾರೆ. ರವೀಂದ್ರಗೆ ಸರ್ಕಾರದ ಕಡೆಯಿಂದ 15 ಲಕ್ಷಕ್ಕೂ ಹೆಚ್ಚು ವೇತನ ಸಿಗ್ಬೇಕಿದೆ. ಇದ್ರಿಂದ ಬೇಸತ್ತು ಆಟೋದ ಮೇಲೆ IAS ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ ಎಂದು ಬರೆಸಿಕೊಂಡಿದ್ದಾರೆ.

Comments are closed.