
ಹೈದರಾಬಾದ್: ತೆಲಂಗಾಣದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖೆಯ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಪಾಪಿ ಪುತ್ರರು ತನ್ನ ತಾಯಿಯ ಮೇಲೆ ಅಮಾನವೀಯತೆ ತೋರಿದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.
ಲಚ್ಚಮ್ಮ ಕೊರೊನಾ ಪಾಸಿಟಿವ್ ಬಂದಿರುವ ವೃದ್ಧೆ. ಈಕೆಗೆ ನಾಲ್ವರು ಪುತ್ರರು ಹಾಗೂ ಓರ್ವ ಮಗಳಿದ್ದಾಳೆ. ಈಕೆಗೆ ವಾಕರ್ ಇಲ್ಲದೇ ನಡೆಯಲು ಅಸಾಧ್ಯ. ಈಕೆ ವೆಲೆರು ಮಂಡಲದ ಪೀಚರಾ ಗ್ರಾಮದ ಕೃಷಿ ಬಾವಿಯ ಬಳಿ ತನ್ನ ಕೆಲ ದಿನಗಳನ್ನು ಕಳೆದಿದ್ದಾರೆ.
ಮಕ್ಕಳ ಜೊತೆ ವಾಸವಾಗಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಮಗೂ ಹರಡಬಹುದು ಎಂಬ ಭಯದಿಂದ ನಾಲ್ವರು ಪುತ್ರರು ಆಕೆಯನ್ನು ಬಾವಿಯ ಬಳಿ ಒಂದು ಶೆಡ್ ಹಾಕಿ ಬಿಟ್ಟು ಹೋಗಿದ್ದಾರೆ.
ಈ ವಿಚಾರ ಇರೋ ಓರ್ವ ಮಗಳ ಗಮನಕ್ಕೆ ಬಂದಿದೆ. ತನ್ನ ತಾಯಿಯ ಸ್ಥಿತಿ ಹಾಗೂ ಸಹೋದರರ ನಡವಳಿಕೆಯಿಂದ ಬೇಸರಗೊಂಡ ಆಕೆ ಕೂಡಲೇ ಹಳ್ಳಿಗೆ ಧಾವಿಸಿದ್ದಾಳೆ. ಅಲ್ಲದೆ ತಾನೇ ತಾಯಿಯನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದು, ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾಳೆ.
ಕಳೆದ 24 ಗಂಟೆಯಲ್ಲಿ ತೆಲಂಗಾಣದಲ್ಲಿ 1,802 ಮಂದಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,42,771ಕ್ಕೆ ಏರಿಕೆಯಾಗಿದೆ. ಒಂದೇ ದಿನ 9 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 895 ಮಂದಿ ಮೃತಪಟ್ಟಿದ್ದಾರೆ. 31,635 ಸಕ್ರಿಯ ಪ್ರಕರಣಗಳಿವೆ.
Comments are closed.