ರಾಷ್ಟ್ರೀಯ

ಭಾರತೀಯ ಸೇನೆಯಿಂದ ಗಡಿಯಲ್ಲಿ ಚೀನಾ ಪ್ರಜೆಗಳ ರಕ್ಷಣೆ

Pinterest LinkedIn Tumblr


ನವದೆಹಲಿ (ಸೆಪ್ಟೆಂಬರ್ 5): ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಎರಡೂ ರಾಷ್ಟ್ರಗಳು ಪರಸ್ಪರ ಮಾತುಕತೆಯಲ್ಲಿ ತೊಡಗಿವೆ. ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಮೂಡಲು ಭಾರತ ನೇರ ಕಾರಣ. ಲಡಾಕ್​ನಲ್ಲಿ ಉಂಟಾಗಿರುವ ಸಮಸ್ಯೆಯ ಹೊಣೆಯನ್ನು ಭಾರತವೇ ಹೊತ್ತುಕೊಳ್ಳಬೇಕು. ನಮಗೆ ಸೇರಿದ ಒಂದೇ ಒಂದು ಇಂಚು ಭೂಮಿಯನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದು ಚೀನಾ ಹೇಳಿದೆ. ಇದು ಭಾರತ- ಚೀನಾ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಈ ಮಧ್ಯೆ, ಉತ್ತರ ಸಿಕ್ಕಿಂ ಭಾಗದಲ್ಲಿ ಸಿಲುಕಿದ್ದ ಚೀನಾ ಸದಸ್ಯರನ್ನು ರಕ್ಷಣೆ ಮಾಡುವ ಮೂಲಕ ಭಾರತೀಯ ಸೇನೆ ಮಾನವೀಯತೆ ಮೆರೆದಿದೆ.

ಉತ್ತರ ಸಿಕ್ಕೀಂನ ಭಾಗದಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸೇರಿ ಮೂವರು ಚೀನಾ ಪ್ರಜೆಗಳು ದಾರಿ ತಪ್ಪಿಕೊಂಡಿದ್ದರು. ಈ ಭಾಗದಲ್ಲಿ ಉಷ್ಣಾಂಶ ಝೀರೋ ಡಿಗ್ರೀ ಇದೆ. ಹೀಗಾಗಿ ಅಪಾಯ ಅರಿತ ಭಾರತೀಯ ಸೇನೆಯ ಸಿಬ್ಬಂದಿ, ಅವರಿಗೆ ಅಗತ್ಯವಿರುವ ವೈದ್ಯಕೀಯ ಸವಲತ್ತು, ಆಮ್ಲಜನಕದ ಪೂರೈಕೆ, ಆಹಾರವನ್ನು ನೀಡಿ ರಕ್ಷಣೆ ಮಾಡಿದೆ. ಇಂತ ಉದ್ವಿಗ್ನ ಪರಿಸ್ಥಿತಿಯಲ್ಲೂ ಭಾರತೀಯ ಸೇನೆ ಚೀನಾ ನಾಗರಿಕರಿಗೆ ಸಹಾಯ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಚೀನಾ ಪ್ರಜೆಗಳಿಗೆ ಸರಿಯಾದ ದಾರಿಯನ್ನು ತೋರಿಸಿ ಸೇನೆ ವಾಪಾಸಾಗಿದೆ. ಭಾರತೀಯ ಸೇನೆಯ ಸಹಾಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ಯವಾಗಿದೆ.

ಭಾರತದ ಯುವಕರ ಅಪಹರಣ:
ಚೀನಾದ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಐವರು ಯುವಕರು ನಾಪತ್ತೆಯಾಗಿದ್ದಾರೆ. ಚೀನಾದ ಪಿಎಲ್​ಎ ಸೇನೆ ಈ ಐವರನ್ನು ಅಪಹರಣ ಮಾಡಿರುವ ಆರೋಪ ಇದೆ. ಗಡಿಭಾಗದ ಸೆರಾ 7 ಪ್ರದೇಶದಿಂದ ಇವರ ಕಿಡ್ನಾಪ್ ಆಗಿರುವ ಶಂಕೆ ಇದೆ. ನಾಪತ್ತೆಯಾದ ಒಬ್ಬ ಯುವಕನ ಸಹೋದರ ತನ್ನ ಫೇಸ್​ಬುಕ್​ನಲ್ಲಿ ಈ ವಿಚಾರ ಬರೆದಿದ್ದು, ಚೀನೀ ಸೇನೆಯಿಂದ ಅಪಹೃತಗೊಂಡಿರುವ ಈ ಐವರನ್ನು ರಕ್ಷಣೆ ಮಾಡಬೇಕೆಂದು ಸರ್ಕಾರವನ್ನು ಕೋರಿಕೊಂಡಿದ್ದಾರೆ.

Comments are closed.