ಕರ್ನಾಟಕ

ಇಂದ್ರಜಿತ್‌ ಡ್ರಗ್ಸ್‌ ಜಾಲದ ಕುರಿತು ಸಾಕ್ಷ್ಯ ಇಲ್ಲದೆ ಮಾತನಾಡಬಾರದು; ರವಿ ಬೆಳಗೆರೆ

Pinterest LinkedIn Tumblr


ಬೆಂಗಳೂರು (ಆಗಸ್ಟ್‌ 29); ಡ್ರಗ್ಸ್‌ ಜಾಲ ಇಡೀ ಬೆಂಗಳೂರನ್ನು ಆವರಿಸಿಕೊಂಡಿದೆ. ಆದರೆ, ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡಬಾರದು. ಇಂದ್ರಜಿತ್‌ ಲಂಕೇಶ್‌ ಯಾರು ನನಗೆ ಗೊತ್ತಿಲ್ಲ. ಆದರೆ, ಸುಮ್ಮನೆ ಮಾತನಾಡಲುವ ಬದಲು ಡ್ರಗ್ಸ್‌ ಜಾಲದ ಬಗ್ಗೆ ತಮ್ಮ ಬಳಿ ಇರುವ ಮಾಹಿತಿಯನ್ನು ಪೊಲೀಸರಿಗೆ ನೀಡಲಿ ಎಂದು ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಕಿಡಿಕಾರಿದ್ದಾರೆ.

ಕಳೆದ ಗುರುವಾರ ಬೆಂಗಳೂರು ಪೊಲೀಸರು ನಗರದಲ್ಲಿ ಡ್ರಗ್ಸ್‌ ಮಾರಾಟದಲ್ಲಿ ಇಬ್ಬರನ್ನು ಬಂಧಿಸಿದ್ದರು. ಇವರ ಬಂಧನದ ಬಳಿಕ ಡ್ರಗ್ಸ್‌ ಮಾಫಿಯಾ ಕುರಿತು ಒಂದರ ಹಿಂದೊಂದರಂತೆ ಕಳವಳಕಾರಿಯಾದಂತಹ ಸುದ್ದಿಗಳು ಬಿತ್ತರವಾಗುತ್ತಲೇ ಇದೆ. ಈ ನಡುವೆ ಹೇಳಿಕೆ ನೀಡಿದ್ದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸ್ಯಾಂಡಲ್‌ ವುಡ್‌ ಮತ್ತು ಡ್ರಗ್ಸ್‌ ಮಾಫಿಯಾಗೆ ಲಿಂಕ್ ಇರುವುದು ನಿಜ.

ಸ್ಯಾಂಡಲ್‌ವುಡ್‌ ಕೊಕೇನ್ ವರೆಗೆ ಬೆಳೆದಿದೆ. ಇಂಡಸ್ಟ್ರಿಯಲ್ಲಿ ಅನೇಕ ನಟನಟಿಯರು ಈ ಡ್ರಗ್ಸ್‌ ಅನ್ನುಬಳಸುತ್ತಿದ್ದಾರೆ. ತಮ್ಮ ಭವಿಷ್ಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ನನಗೆ ಸೂಕ್ತ ರಕ್ಷಣೆ ನೀಡಿದರೆ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ” ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.

ಇಂದ್ರಜಿತ್‌ ಲಂಕೇಶ್‌ ಹೇಳಿಕೆ ಬೆನ್ನಿಗೆ ಈ ಹೇಳಿಕೆ ವಿರುದ್ಧ ತೀವ್ರ ಟೀಕಾಸ್ತ್ರ ಎಸೆದಿರುವ ಹಿರಿಯ ಪತ್ರಕರ್ತರೂ ಆದ ರವಿ ಬೆಳಗೆರೆ, ” ಇಂದ್ರಜಿತ್ ಲಂಕೇಶ್ ಯಾರು ಅವರು..? ಅವರ ತಂದೆಯ ಬಗ್ಗೆಯ ಬಗ್ಗೆ ಕೇಳಿದ್ದೇನೆ. ಆದರೆ, ಇವರು ಯಾರು ಗೊತ್ತಿಲ್ಲ What non sense he is talking ನಟಿ ನಟಿಯರು ಅಂತ ಸುಮ್ಮನೆ ಹೇಳೋದು ಅಲ್ಲ.

ಗಾಂಜಾ ಅನ್ನೋದು ಡಿಜೆ ಹಳ್ಳಿ, ಕೆಜಿ ಹಳ್ಳಿಯ ಮನೆ ಮನೆಯಲ್ಲಿಯೂ ಸಿಗುತ್ತೆ. ಸುಮ್ಮನೆ ಎವಿಡೆನ್ಸ್ ಇಲ್ಲದೆ ಮಾತನಾಡಬಾರದು. ವಿಚಾರ ಗೊತ್ತಿದ್ದರೆ ಹೇಳಬೇಕು, ಅದು ಬಿಟ್ಟು ಭದ್ರತೆ ಅಂತ ಮಾತನಾಡೋದು ಸರಿಯಲ್ಲ. ಯಾರ ಸಂಪರ್ದಲ್ಲಿ ಯಾರು ಇದಾರೆ ಅಂತ ಗೊತ್ತಿದ್ದರೆ ಹೇಳಬೇಕು?” ಎಂದು ಕಿಡಿಕಾರಿದ್ದಾರೆ.

ಅಲ್ಲದೆ,”ಲಾಕ್ ಡೌನ್ ಆಗಿದ್ದೇ ಈ ರೀತಿ ಡ್ರಗ್ ಅಡಿಕ್ಟ್ ಆಗೋಕೆ ಕಾರಣವಾಯ್ತು. ಬಾರ್ , ವೈನ್ ಶಾಪ್ ಕ್ಲೋಸ್ ಆದ ಕಾರಣ ಜನ ಇಂತಹ ಡ್ರಗ್ಸ್‌ ದಾಸರಾಗಿದ್ದಾರೆ. ಗಾಂಜಾ ಸೇದೋಕು, ಡ್ರಗ್ಸ್ ಸೇವನೆಗೂ ತುಂಬಾನೇ ವ್ಯತ್ಯಾಸ ಇದೆ. ಡ್ರಗ್ ಅನ್ನೋದು ಬೆಂಗಳೂರನ್ನು ಇಡೀ ಆವರಿಸಿಕೊಂಡಿದೆ. ಡ್ರಗ್ ಅಂದ್ರೆ ಗಾಂಜಾ ಒಂದೇ ಅಲ್ಲ, ಅದು ಬಹಳ ಚೀಪ್ ಆಗಿರೋದು ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಡ್ರಗ್ ಅಡಿಕ್ಟ್ ಆಗಿ ಮಾಡಲಾಗುತ್ತಿದೆ.

ಆದರೆ, ಸಿನಿಮಾ ನಟ ನಟಿಯರು ಡ್ರಗ್ ಅಡಿಕ್ಟ್ ಆದ್ರೆ ಏನು ಅನಿಸಲ್ಲ, ಆದರೆ, ಮಕ್ಕಳು ಅಡಿಕ್ಟ್‌ ಆದ್ರೆ ಬೇಜಾರಾಗುತ್ತೆ. ಜಗ್ಗೇಶ್ಣ ಉಪೇಂದ್ರ, ದುನಿಯಾ ವಿಜಿ ಡ್ರಗ್ಸ್ ತಗೋಳಲ್ಲ ಸಿನಿಮಾ ನಟರು‌, ನಟಿಯರು ಡ್ರಗ್ಸ್ ತಗೋಳೊದು ಮುಖ್ಯವಲ್ಲ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಮಾಡೋದು ಮುಖ್ಯ ಅದನ್ನು ಪೊಲೀಸ್ ಅಧಿಕಾರಿಗಳು ಮೊದಲು ತಡೆಯಬೇಕು” ಎಂದು ಮನವಿ ಮಾಡಿದ್ದಾರೆ.

Comments are closed.