ರಾಷ್ಟ್ರೀಯ

ಎನ್‌ಐಎ ಅಧಿಕಾರಿಗಳೆಂದು ಪೋಸ್ ನೀಡಿ, ಉದ್ಯಮಿಯಿಂದ 2 ಕೋಟಿ ರೂ. ವಸೂಲಿ !

Pinterest LinkedIn Tumblr

ಚೆನ್ನೈ: ಉದ್ಯಮಿಯೊಬ್ಬರ ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಕೆಲವು ಜನರನ್ನು ಬಂಧಿಸಿದ ಮಾರನೇ ದಿನ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಆರೋಪಿಗಳು ದೇಶದ ಪ್ರಮುಖ ತನಿಖಾ ಸಂಸ್ಥೆ ಎನ್‌ಐಎ ಅಧಿಕಾರಿಗಳೆಂದು ಪೋಸ್ ನೀಡಿ, ಉದ್ಯಮಿಯಿಂದ ಬರೋಬ್ಬರಿ 2 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ.

ಹಣ ಕಳೆದುಕೊಂಡ ಉದ್ಯಮಿ ಎಸ್ ದಿವಾನ್ ಅಕ್ಬರ್ (45) ಎಂದು ಗುರುತಿಸಲಾಗಿದ್ದು, ಅವರನ್ನು ಅಪಹರಿಸಿ, ಥಳಿಸಲಾಗಿದೆ. ಅಲ್ಲದೆ ತಾನು ಹಲವು ಅಪರಾಧಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಮಾಡಿ, ಅದನ್ನು ವಿಡಿಯೋ ಮಾಡಿದ್ದಾರೆ.

ಘಟನೆಯ ವಿಡಿಯೋ ಮಾಡಿದ ನಂತರ, ಮೂರು ಕೋಟಿ ರೂಪಾಯಿ ನೀಡದಿದ್ದರೆ ಎನ್ ಕೌಂಟರ್ ಮಾಡುವುದಾಗಿ ಉದ್ಯಮಿಗೆ ಬೆದರಿಕೆ ಹಾಕಿದ್ದಾರೆ. ಆತಂಕಗೊಂಡ ಉದ್ಯಮಿ ಹಣ ನೀಡಲು ಒಪ್ಪಿದ್ದಾರೆ.

ಆಗಸ್ಟ್ 17 ರ ಬೆಳಗ್ಗೆ, ಸ್ಕ್ರೀನ್ ಪ್ರಿಂಟಿಂಗ್ ಸಂಸ್ಥೆಯನ್ನು ನಡೆಸುತ್ತಿರುವ ಅಕ್ಬರ್ ಅವರು ತಮ್ಮ ಸ್ನೇಹಿತನ ಮನೆಗೆ ತೆರೆ ವಾಪಸ್ ಬರುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದಾರೆ.

ಉದ್ಯಮಿಯನ್ನು ಕಾರಿನಲ್ಲಿ ಕರೆದೊಯ್ದ ನಾಲ್ವರು ದುಷ್ಕರ್ಮಿಗಳು ತಾವು ಎನ್ಐಎ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. “ಉದ್ಯಮಿ ಕಾರು ಹತ್ತಿದ ನಂತರ, ಅವರು ಟ್ರಿಪ್ಲಿಕೇನ್ ಕಡೆಗೆ ಹೊರಟರು ಮತ್ತು ಬೆಲ್ಸ್ ರಸ್ತೆಯಲ್ಲಿ ಮತ್ತೊಬ್ಬ ವ್ಯಕ್ತಿ ಕಾರು ಹತ್ತಿದ್ದಾರೆ. ಬಳಿಕ ಕಾರು ಇಸಿಆರ್ ತಲುಪಿದ ಕೂಡಲೇ, ಅಕ್ಬರ್‌ ಅವರ ಕಣ್ಣುಮುಚ್ಚಿ ಕೆಲವು ನಿಮಿಷಗಳ ನಂತರ ಅವರನ್ನು ಕೋಣೆಯಲ್ಲಿ ಬಂಧಿಸಿ ಹಲ್ಲೆ ಮಾಡಲಾಗಿದೆ ”ಎಂದು ಪೊಲೀಸ್ ತಿಳಿಸಿದ್ದಾರೆ.

ಅಕ್ಬರ್ ಅವರು ಜೀವ ಭಯದಿಂದ ತಮ್ಮ ಸಹೋದರಿನೆ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ ಎರಡು ಕೋಟಿ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಅವರ ಸಹೋದರ ಅಲ್ಬರ್ಟ್ ಚಿತ್ರ ಮಂದಿರದ ಬಳಿ ವ್ಯಕ್ತಿಯೊಬ್ಬರಿಗೆ ಹಣ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹಣ ಪಡೆದ ನಂತರ ದುಷ್ಕರ್ಮಿಗಳು ಉದ್ಯಮಿಯನ್ನು ಪ್ಯಾರಿಸ್ ಕಾರ್ನರ್ ಬಳಿ ಬಿಟ್ಟು, ಉಳಿದ ಹಣಕ್ಕಾಗಿ ಅವರ ಪಾಸ್ಟ್ ಪೋರ್ಟ್ ಡೆಬಿಟ್ ಕಾರ್ಟ್, ಮನೆ ಕೀಯನ್ನು ಕಿತ್ತುಕೊಂಡು, ಎರಡು ದಿನದಲ್ಲಿ ಬಾಕಿ 1 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿ ಕಳಿಸಿದ್ದಾರೆ.

ಉದ್ಯಮಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ತನಿಖೆಗೆ ವಿಶೇಷ ತಂಡ ರಚಿಸಿದ ಪೊಲೀಸರು, ನಕಲಿ ಎನ್ಐಎ ಅಧಿಕಾರಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.