
ನಾಸಿಕ್ (ಮಹಾರಾಷ್ಟ್ರ): ನಾಸಿಕ್‌ನ ಈಗಟಪುರಿ ಪ್ರದೇಶದಲ್ಲಿರುವ ಗುಡಿಸಲಿನಲ್ಲಿ ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಗುಡಿಸಿಲಿನಲ್ಲಿ ತನ್ನ ಮುದ್ದಾದ ಮರಿಗಳನ್ನು ಮುದ್ದಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮರಿಗಳ ಜತೆ ಚಿರತೆ ಇರುವ ವಿಡಿಯೋ ಅನ್ನು ಎಎನ್ಐ ಟ್ವಿಟ್ಟರ್‌ನಲ್ಲಿ ಹಂಚಿದ್ದು ಇದೀಗ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ವಿಡಿಯೋದಲ್ಲಿ ನಾಲ್ಕು ಮುದ್ದಾದ ಮರಿಗಳು ಸ್ವಚ್ಛಂದವಾಗಿ ಆಟವಾಡುತ್ತಿರುವುದು ಕಂಡುಬರುತ್ತದೆ.
ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಯಾದ ಗಣೇಶ್ ರಾವ್ ಜೋಲಿ ನಾಲ್ಕು ಮರಿಗಳು ಸುರಕ್ಷಿತ ಹಾಗೂ ಆರೋಗ್ಯವಾಗಿವೆ ಅವುಗಳ ಚಲನವಲನಗಳ ಕುರಿತು ವಿಡಿಯೋ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ ಎಂದಿದ್ದಾರೆ.
51 ಸೆಕೆಂಡ್‌ನ ಈ ವಿಡಿಯೋ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಮ್ಮ-ಮಕ್ಕಳ ಸಂಬಂಧದ ಕುರಿತಂತೆ ಸಾಕಷ್ಟು ಕಮೆಂಟ್‌ಗಳೂ ಬರುತ್ತಿವೆ.
Comments are closed.