ರಾಷ್ಟ್ರೀಯ

ಸೆಕ್ಸ್‌ಗೆ ನಿರಾಕರಿಸಿದ ಹೆಂಡತಿ- ಖಿನ್ನತೆಯಿಂದ ಗಂಡ ಆತ್ಮಹತ್ಯೆ

Pinterest LinkedIn Tumblr


ಅಹಮದಾಬಾದ್: 22 ತಿಂಗಳು ಜೊತೆಯಲ್ಲಿದ್ದರೂ ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪದ ಹಿನ್ನೆಲೆ ಖಿನ್ನತೆಗೊಳಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಸುರೇಂದ್ರ ಸಿಂಗ್ ಆತ್ಮಹತ್ಯೆಗೆ ಶರಣಾದ ಪತಿ. ಈ ಸಂಬಂಧ ಸುರೇಂದ್ರ ತಾಯಿ ಮಾಲಿ ಪರಮಾರ್ ಸೊಸೆಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುತ್ರ ಸುರೇಂದ್ರ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನು. ಅಕ್ಟೋಬರ್ 2018ರಂದು ಗೀತಾ ಎಂಬ ಯುವತಿ ಜೊತೆ ಮಗನ ಮದುವೆ ಮಾಡಲಾಗಿತ್ತು. ಇದಕ್ಕೂ ಮೊದಲು ಅಂದ್ರೆ 2016ರಲ್ಲಿ ಸುರೇಂದ್ರ ಮೊದಲ ಪತ್ನಿ ಜೊತೆ ವಿಚ್ಛೇದನ ಪಡೆದುಕೊಂಡಿದ್ದನು. ಇತ್ತ ಗೀತಾ ತನ್ನ ಮೊದಲು ಎರಡು ಮದುವೆಗಳಿಂದ ವಿಚ್ಛೇದನ ಪಡೆದುಕೊಂಡಿದ್ದಳು ಎಂದು ಮಲಿ ಪರಮಾರ್ ಹೇಳಿದ್ದಾರೆ.

ಒಂದು ದಿನ ಕೋಣೆಯೊಳಗೆ ಮಗ ಮತ್ತು ಸೊಸೆ ಪ್ರತ್ಯೇಕವಾಗಿ ಮಲಗುತ್ತಿರೋ ವಿಷಯ ನನ್ನ ಗಮನಕ್ಕೆ ಬಂತು. ಮಗನನ್ನ ಕೇಳಿದಾಗ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ನಡೆದಿಲ್ಲ ಎಂಬ ವಿಷಯ ತಿಳಿಸಿದ. ಈ ಬಗ್ಗೆ ಸೊಸೆಯನ್ನ ಕೇಳಿದಾಗ ಆಕೆ ಪತಿ ಜೊತೆ ಮಲಗಲು ಇಷ್ಟವಿಲ್ಲ ಅಂತ ಹೇಳಿದ್ದಳು ಎಂದು ಸುರೇಂದ್ರ ದೂರಿನಲ್ಲಿ ದಾಖಲಿಸಿದ್ದಾರೆ.

ಪತ್ನಿ ಗೀತಾ ದೈಹಿಕ ಸಂಪರ್ಕ ಹೊಂದಲು ಅನುಮತಿ ನೀಡುತ್ತಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು. ತನ್ನ ಸಾಂಸರಿಕ ಜೀವನದ ಕುರಿತು ಸುರೇಂದ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇಬ್ಬರ ನಡುವಿನ ಸಂಬಂಧವೂ ಚೆನ್ನಾಗಿರಲಿಲ್ಲ. ಹೀಗಾಗಿ ಸೊಸೆ ಗೀತಾ ತವರು ಮನೆ ಸೇರಿಕೊಂಡಿದ್ದಳು.

ಮನೆಯ ಸದಸ್ಯರು ಹೊರಗೆ ಹೋಗಿದ್ದ ವೇಳೆ ಸುರೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೊಸೆ ಗೀತಾ ಪ್ರಚೋದಿಸಿದ್ದಾಳೆ ಎಂದು ಸುರೇಂದ್ರ ಕುಟುಂಬಸ್ಥರು ಆರೋಪಿಸಿ ದೂರು ದಾಖಲಿಸಿದ್ದಾರೆ.

Comments are closed.