
ನವದೆಹಲಿ: ದೇಶದಲ್ಲಿ ಬುಧವಾರ ಹೊಸದಾಗಿ 37,724 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 648 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಮಹಾಮಾರಿ ವೈರಸ್ ದೇಶದಲ್ಲಿ 28,732 ಮಂದಿಯನ್ನು ಬಲಿ ಪಡೆದುಕೊಂಡಿದೆ.
ಇನ್ನು 11,92,915 ಮಂದಿ ಸೋಂಕಿತರ ಪೈಕಿ 7,24,578 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿನ್ನೂ 411133 ಮಂದಿ ಸೋಂಕಿನಿಂದಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಸತತ 7ನೇ ದಿನವೂ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ 8 ಸಾವಿರದ ಗಡಿ ದಾಟಿದೆ. ಈ ಮೂಲಕ ಕಳೆದೊಂದು ವಾರದಲ್ಲೇ ಮಹಾರಾಷ್ಟ್ರದಲ್ಲಿ ಒಟ್ಟು 43 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾದಂತಾಗಿದೆ. ಜೊತೆಗೆ ನಿನ್ನೆ 246ರೊಂದಿಗೆ ಒಟ್ಟು ಸಾವಿನ ಸಂಖ್ಯೆ 12,276ಕ್ಕೆ ಜಿಗಿದಿದೆ.
ಇನ್ನು ತಮಿಳುನಾಡಿನಲ್ಲಿ 4965, ಆಂಧ್ರಪ್ರದೇಶ 4944, ಕರ್ನಾಟಕ 3649, ಪಶ್ಚಿಮ ಬಂಗಾಳ 2261, ಉತ್ತರಪ್ರದೇಶದಲ್ಲಿ 2128 ಸೋಂಕಿತರ ಸಂಖಅಯೆ ದಾಖಲಾಗಿದೆ. ನಿನ್ನೆ ತಮಿಳುನಾಡು 75, ಆಂಧ್ರಪ್ರದೇಶ 62, ಕರ್ನಾಟಕ 61, ಉತ್ತರಪ್ರದೇಶದ 37, ಪಶ್ಚಿಮ ಬಂಗಾಳದಲ್ಲಿ 35 ಮಂದಿ ಕೊರೋನಾಗಕ್ಕೆ ಬಲಿಯಾಗಿದ್ದಾರೆ.
Comments are closed.