ರಾಷ್ಟ್ರೀಯ

ಕಾಂಗ್ರೆಸ್ ವಕ್ತಾರ ಸಂಜಯ್ ಝಾಗೆ ಕೊರೋನಾ ಪಾಸಿಟಿವ್!

Pinterest LinkedIn Tumblr


ನವದೆಹಲಿ: ಕಾಂಗ್ರ್ರೆಸ್ ಪಕ್ಷದ ವಕ್ತಾರ ಸಂಜಯ್ ಝಾ ಅವರುಗೆ ಕೊರೋನಾವೈರಸ್ ಸೋಂಕು ತಗುಲಿದೆ. ತಮಗೆ ಸೋಂಕು ತಗುಲಿರುವ ಬಗ್ಗೆ ಝಾ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.

“ನನ್ನ ಟೆಸ್ಟ್ ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ಯಾವ ರೋಗಲಕ್ಷಣ ಕಾಣಿಸದ ಕಾರಣ ಮುಂದಿನ 10-12 ದಿನಗಳ ಕಾಲ ನಾನು ನನ್ನ ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್​​ನಲ್ಲಿ ಇರಲಿದ್ದೇನೆ.

“ಕೊರೋನಾ ವಿಚಾರದಲ್ಲಿ ನಾವೆಲ್ಲರೂ ದುರ್ಬಲರಾಗಿದ್ದು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಬಗ್ಗೆ ನಿರ್ಲಕ್ಷ್ಯ ಬೇಡ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ” ಎಂದು ಝಾ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಸಂಜಯ್ ಝಾ ಅವರಿಗೆ ಕೊರೋನಾ ಸೋಂಕು ದೃಉಢಪಟ್ಟಿರುವುದು ತಿಳಿಯುತ್ತಿದ್ದಂತೆ ಮಧ್ಯಪ್ರದೇಶದ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಶಿವಸೇನಾ ಸಾನ್ಯಕಿ ಪ್ರಿಯಾಂಕಾ ಚತುರ್ವೇದಿ “ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ, ಶೀಘ್ರ ಗುಣಮುಖರಾಗಿ ಬನ್ನಿ” ಎಂದು ಟ್ವೀಟ್ ಮಾಡಿ ಹಾರೈಸಿದ್ದಾರೆ.

Comments are closed.