ರಾಷ್ಟ್ರೀಯ

ಟಿಕ್​​​​ ಟಾಕ್​​​​​ ಪರಿಚಯ: ಮಹಿಳೆ ಮೇಲೆ ಅತ್ಯಾಚಾರ

Pinterest LinkedIn Tumblr


ಹೈದರಾಬಾದ್​​(ಮೇ.18): ಟಿಕ್ ಟಾಕ್‍ನಲ್ಲಿ ಪರಿಚಯವಾದ ಕಾಮುಕನೋರ್ವ ಮದುವೆಯಾಗುತ್ತೇನೆ ಎಂದು ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಅಮಾನುಷ ಕೃತ್ಯ ಹೈದರಾಬಾದ್​ನಲ್ಲಿ ನಡೆದಿದೆ. ಇಲ್ಲಿನ ಓಲ್ಡ್ ಸಿಟಿ ಮೂಲದ 27 ವರ್ಷ ಮಹಿಳೆ ಮೇಲೆ ಅಕ್ಬರ್​​ ಶಾ(34) ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಅಕ್ಬರ್​​​ ಶಾ ಎಂಬ ಕಾಮುಕ ಟಿಕ್ ಟಾಕ್‍ನಲ್ಲಿ ಅತ್ಯಾಚಾರ ಸಂತ್ರಸ್ತೆ ಅನೇಕ ವಿಡಿಯೋಗಳಿಗೆ ಲೈಕ್ ಮಾಡಿದ್ದ. ಅಷ್ಟೇ ಅಲ್ಲದೆ ಟಿಕ್​​ ಟಾಕ್​​ನಲ್ಲೇ ಇಬ್ಬರು ಫ್ರೆಂಡ್ಸ್​​ ಆಗಿದ್ದರು. ಈ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಮಹಿಳೆಯ ಮೊಬೈಲ್ ನಂಬರ್ ಪಡೆದ ಅಕ್ಬರ್​​ ಶಾ ಗಂಟೆಗಟ್ಟಲೇ ಫೋನಿನ್ನಲ್ಲಿ ಮಾತಾಡಲು ಶುರು ಮಾಡಿದ. ಸ್ನೇಹ, ಪ್ರೀತಿಗೆ ತಿರುಗಿದ ಕಾರಣ ಮಹಿಳೆಯನ್ನು ಮದುವೆಯಾಗುವುದಾಗಿ ಅಕ್ಬರ್​​ ನಂಬಿಸಿದ.

ಇನ್ನು, ಅಕ್ಬರ್​​ ಆಕೆಯ ಕುಟುಂಬದ ಸಮ್ಮುಖದಲ್ಲೇ ನಕಲಿ ನಿಶ್ಚಿತಾರ್ಥ ಮಾಡಿಕೊಂಡ. ಇದರಿಂದ ಮಹಿಳೆಯೂ ಈತನನ್ನು ತುಂಬಾ ನಂಬಿದ್ದಳು. ಇಬ್ಬರು ಇನ್ನೇನು ಮದುವೆ ಆಗಲಿದ್ದಾರೆ ಎಂದು ಭಾವಿಸಿದ್ದರು.

ಒಂದು ದಿನ ಅಕ್ಬರ್​​​ ತನ್ನ ತಂಗಿ ಮನೆಗೆ ಈಕೆಯನ್ನು ಕರೆದೊಯ್ದ. ಆಗ ಮಹಿಳೆ ಒಪ್ಪಿಗೆ ಇಲ್ಲದೆಯೇ ಅತ್ಯಾಚಾರಕ್ಕೆ ಯತ್ನಿಸಿದ. ಮತ್ತೆ ಎಂಗೇಜ್​​ಮೆಂಟ್​​ ಆದ ಮೇಲೆ ಇನ್ನೊಮ್ಮೆ ಆಕೆ ಮೇಲೆ ಅತ್ಯಾಚಾರ ಮಾಡಿದ. ಹೀಗೆ ಅತ್ಯಾಚಾರಕ್ಕೆ ಒಳಗಾದ ತಾನು ಮೋಸ ಹೋದ ವಿಚಾರ ಗೊತ್ತಾದ ಮೇಲೆ ಸಂತ್ರಸ್ತೆ ದೂರು ನೀಡಿದ್ಧಾಳೆ ಎಂದು ಚಂದ್ರಯಾನಗುಟ್ಟ ಪೊಲೀಸ್​​ ಠಾಣಾಧಿಕಾರಿ ಹೇಳಿದ್ದಾರೆ.

ಇನ್ನು, ಈ ಕೇಸ್​ ತನಿಖೆ ಹಂತದಲ್ಲಿದೆ. ಅಕ್ಬರ್​​ ಈಗಾಗಲೇ ಮದುವೆ ಆಗಿ ನಾಲ್ಕು ಮಕ್ಕಳ ತಂದೆ ಎಂದು ಪೊಲೀಸ್​ ಠಾಣಾಧಿಕಾರಿ ತಿಳಿಸಿದ್ದಾರೆ.

Comments are closed.