ಉಡುಪಿ: ಉಡುಪಿ ಜಿಲ್ಲೆಯ ಹಲವೆಡೆ ಸೋಮವಾರ ಬೆಳಿಗ್ಗೆನಿಂದ ಮೋಡ ಕವಿದ ವಾತಾವರಣವಿದ್ದು ಗುಡುಗು ಮಿಂಚು ಇತ್ತು. ಮಧ್ಯಾಹ್ನ 11 ಗಂಟೆ ಬಳಿಕ ಅಲ್ಲಲ್ಲಿ ಸಿಡಿಲು-ಗುಡುಗು ಗಾಳಿ ಸಹಿತ ಬಾರೀ ಮಳೆಯಾಗಿದೆ.

ಈಗಾಗಾಲೇ ಕರಾವಳಿ ಭಾಗದಲ್ಲಿ ಕೃಷಿ ಕಾರ್ಯಗಳು ಆರಂಭಗೊಂಡಿದ್ದು ರೈತನ ಮೊಗದಲ್ಲಿ ಮಂದಹಾಸ ಬೀರಿದೆ. ಕೊರೋನಾ ಸೋಕಿನ ಭಯದ ನಡುವೆ ಇಳೆಗೆ ವರ್ಷಧಾರೆಯಾಗುತ್ತಿದ್ದು ಅನ್ನದಾತ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ.
ಇತ್ತ ಮಳೆಗಾಲಕ್ಕೆ ಕೆಲವು ಕಡೆ ಸ್ಥಳಿಯಾಡಳಿತ ಸಜ್ಜುಗೊಂಡಿಲ್ಲ. ಹೀಗಾಗಿ ಚರಂಡಿ ಅವ್ಯವಸ್ಥೆಯಿಂದ ಕೃತಕ ಕೆರೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಇನ್ನು ಕುಂದಾಪುರ ಬಸ್ರೂರು ಮೂರುಕೈ ಪ್ರದೇಶದಿಂದ ಶಾಸ್ತ್ರಿ ವೃತ್ತದವರೆಗೆ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು ಇದು ಲಾಕ್ ಡೌನ್ ಹಿನ್ನಲೆ ತಿಂಗಳುಗಳಕಾಲ ನಿಂತಿತ್ತು. ಅರೆಬರೆ ಕೆಲಸದಿಂದಾಗಿ ಮಳೆ ನೀರಿನಿಂದ ವಾಹನ ಸವಾರರು ಪರದಾಡುವಂತಾಗಿದೆ.
ಇನ್ನು ಕಟಪಾಡಿಯಲ್ಲಿ ಭಾನುವಾರ ರಾತ್ರಿ 22 ವರ್ಷ ಪ್ರಾಯದ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.