ಉಡುಪಿ: ಕೋವಿಡ್-19 ಕೊರೋನಾ ಮಹಾಮಾರಿ ಹಿನ್ನೆಲೆ ಎಲ್ಲೆಡೆ ಲಾಕ್ ಡೌನ್ ಆದೇಸವಿದೆ. ಆದರೂ ಕೂಡ ಕೆಲವೊಬ್ಬರು ಈ ನಿಯಮ ಉಲ್ಲಂಘಿಸಿ ಸುಖಾಸುಮ್ಮನೆ ರಸ್ತೆಗಿಳಿಯುತ್ತಿರುವುದು ಕಂಡುಬಂದ ಹಿನ್ನೆಲೆ ಪೊಲೀಸರು ಹೊಸದೊಂದು ಮಾರ್ಗ ಕಂಡುಕೊಂಡಿದ್ದಾರೆ.

ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಂತೆ ಕಾಪು, ಶಿರ್ವ, ಪಡುಬಿದ್ರಿ ಮೊದಲಾದೆಡೆ ಪೊಲೀಸರು ಡ್ರೋನ್ ಕ್ಯಾಮೆರಾ ಬಳಸಿ ಲಾಕ್ ಡೌನ್ ನಿಯಮ ಉಲ್ಲಂಘಿಸುವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಬೆಳಿಗ್ಗೆ 11 ಗಂಟೆ ಬಳಿಕ ಅನಗತ್ಯ ಕಾರಣವನ್ನಿಟ್ಟುಕೊಂಡು ರಸ್ತೆಗಿಳಿಯುವುದು, ಅಂಗಡಿಗಳನ್ನು ತೆರೆದಿರುವುದು ಸೇರಿದಂತೆ ಆದೇಶ ಪಾಲಿಸವರಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಅಲ್ಲದೇ ಇದೇ ವೇಳೆ ಪೊಲೀಸರು ಮೈಕ್ ಮೂಲಕ ಜಾಗ್ರತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೆಜಮಾಡಿ ಚೆಕ್ ಪೋಸ್ಟ್ ಬಳಿಯೂ ಡ್ರೋನ್ ಮೂಲಕ ತಪಾಸಣೆ ಕಾರ್ಯವಾಗುತ್ತಿದೆ.
ಪಡುಬಿದ್ರೆ ಪಿಎಸ್ಐ ಸುಬ್ಬಣ್ಣ, ಕಾಪು ಪಿಎಸ್ಐ ಐ.ಆರ್. ಗಡ್ಡೇಕರ್ ಹಾಗೂ ಸಿಬ್ಬಂದಿಗಳು ಕೊರೋನಾ ಜಾಗ್ರತಿ ಮೂಡಿಸುವಲ್ಲಿ ಮತ್ತು ಲಾಕ್ ಡೌನ್ ಪಾಲನೆಗೆ ಅಗತ್ಯಕಮ ಕೈಗೊಳ್ಳುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.