
ಲಂಡನ್: ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಇದೀಗ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಮಹಾಮಾರಿಗೆ ಪ್ರಪಂಚದಾದ್ಯಂತ 1.60 ಲಕ್ಷ ಮಂದಿ ಬಲಿಯಾಗಿದ್ದು, ಬರೋಬ್ಬರಿ 23 ಲಕ್ಷ ಜನರದಲ್ಲಿ ಸೋಂಕು ಪತ್ತೆಯಾಗಿದೆ.
ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಮಾಹಿತಿ ನೀಡಿರುವ ಪ್ರಕಾರ, ಜಾಗತಿಕವಾಗಿ ಕೊರೋನಾಗೆ ಒಟ್ಟು 160,759 ಮಂದಿ ಬಲಿಯಾಗಿದ್ದು, 2,331,085 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.
ಇನ್ನು ಸೋಂಕಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷಾಂತರ ಮಂದಿಯ ಪೈಕಿ 597,194 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ.
ಸ್ಪೇನ್ ನಲ್ಲಿ 194,416 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 20,639 ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ 175,925 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 23,227 ಮಂದಿ ಬಲಿಯಾಗಿದ್ದಾರೆ. ಫ್ರಾನ್ಸ್ ನಲ್ಲಿ 151,793 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 19,323 ಮೃತಪಟ್ಟಿದ್ದಾರೆ.
ಇನ್ನು ಜರ್ಮನಿಯಲ್ಲಿ 143,724 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, 4,538 ಮಂದಿ ಬಲಿಯಾಗಿದ್ದಾರೆ. ಬ್ರಿಟನ್ ನಲ್ಲಿ 114,217 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 15,464 ಜನರು ಬಲಿಯಾಗಿದ್ದಾರೆ.
Comments are closed.