
ನವದೆಹಲಿ: ವಿಜ್ಞಾನಿಗಳು ನಿರಂತರವಾಗಿ ಕರೋನಾ ವೈರಸ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ದಿನೇ ದಿನೇ ಕರೋನಾ ವೈರಸ್ ಬಗ್ಗೆ ಹೊಸ ಹೊಸ ಭಯಾನಕ ಮಾಹಿತಿಗಳು ಹೊರಬರುತ್ತಿವೆ. ಇದು ಕೇವಲ ಮನುಷ್ಯನ ಸ್ಪರ್ಶದಿಂದ, ಸೀನುವಾಗ, ಕೆಮ್ಮುವಾಗ ಹರಡುತ್ತದೆ ಎಂದು ಮೊದಲು ಕಂಡುಹಿಡಿಯಲಾಗಿತ್ತು. ಅದಾದ ಬಳಿಕ ವಿಜ್ಞಾನಿಗಳು ಇದು ಮಲ ಮತ್ತು ಪ್ರಾಣಿಗಳಿಂದಲೂ ಹರಡಿತು ಎಂದು ಹೇಳಿದ್ದರು. ಆದರೆ ಈಗ ಕರೋನಾ ನೀರಿನ ಮೂಲಕವೂ ಹರಡಬಹುದು ಎಂಬ ಆಘಾತಕಾರಿ ಮಾಹಿತಿಯನ್ನ ವಿಜ್ಞಾನಿಗಳು ಹೊರಹಾಕಿದ್ದಾರೆ. ಭೂಮಿಯ ಮೇಲಿನ ಎಲ್ಲ ಜೀವಾಂಶಗಳೂ ನೀರಿನ ಮೇಲೆ ಅವಲಂಬಿತವಾಗಿರುವುದರಿಂದ ವಿಜ್ಞಾನಿಗಳ ಈ ರಿಸರ್ಚ್ ಜನರಲ್ಲಿ ಆತಂಕ ಸೃಷ್ಟಿಸಿದೆ.
ಆನಲೈನ್ ಜರ್ನಲ್ ಕೆಡಬ್ಯ್ಲೂಆರ್ (KWR) ಪ್ರಕಾರ ನೆದರ್ಲೆಂಡ್ಸ್ ನ ವೈದ್ಯರು ಹೇಳುವುದೇನೆಂದರೆ ಅವರ ದೇಶದಲ್ಲಿನ ವಾಟರ್ ಟ್ರೀಟಮೆಂಟ್ ಪ್ಲ್ಯಾಂಟ್ ನಲ್ಲಿ ಕರೋನಾ ವೈರಸ್ಸಿನ ಮೂರು ಸಕ್ರೀಯ ಜೀನ್ಸ್ ಪತ್ತೆಯಾಗಿವೆಯಂತೆ. ಇದೇ ರೀತಿ UK Centre For Ecology & Hydrology ನ ಪ್ರಕಾರ ಕರೋನಾ ವೈರಸ್ ಮಲ ಮತ್ತು ಮಲಿನ ನೀರಿನಲ್ಲೂ ಕಂಡುಬಂದಿವೆಯಂತ ತಿಳಿಸಿದೆ. ಆದರೆ ಈ ವೈರಸ್ ನೀರಿನಲ್ಲಿ ಎಷ್ಟು ಹೊತ್ತು ಜೀವಂತವಿರುತ್ತದೆ ಅನ್ನೋದು ಮಾತ್ರ ಇದುವರೆಗೂ ತಿಳಿದುಬಂದಿಲ್ಲ. ಇದೇ ವಿಷಯದ ಬಗ್ಗೆ Environmental Science: Water Research & Technology ನಲ್ಲೂ ಕೂಡ ನೀರಿನಿಂದ ಕರೋನಾ ಭಯವಿರುವ ಬಗ್ಗೆ ರಿಪೋರ್ಟ್ ಒಂದನ್ನ ಪಬ್ಲಿಷ್ ಮಾಡಿದೆ.
ನೀರಿನಿಂದ ಕೊರೋನಾ ವೈರಸ್ ಹರಡಬಹುದು, ಈ ಬಗ್ಗೆ ಅಧ್ಯಯನ ಹಾಗು ರಿಸರ್ಚ್ ಗಾಗಿ University of California ದ ವಿಜ್ಞಾನಿಗಳ ಸಮೇತ University of Salerno ದ ಸಂಶೋಧನಕಾರರೂ ಈ ಟೀಂ ನಲ್ಲಿ ಭಾಗಿಯಾಗಿದ್ದಾರೆ. ಈ ಅಧ್ಯಯನದಲ್ಲಿ ತಿಳಿದುಬಂದಿರುವ ವಿಷಯವೇನೆಂದರೆ 2002-03 ರಲ್ಲಿ ಸಾರ್ಸ್ ವೈರಸ್ ಪ್ರಕೋಪದಿಂದ ಜನರಿಗೆ ಕೊರೋನಾದಂತೆಯೇ ಶ್ವಾಸ ತೆಗೆದುಕೊಳ್ಳುವಲ್ಲಿ ತೊಂದರೆಯಾಗುತ್ತಿತ್ತು. ಆಗ ಸಾರ್ಸ್ ವೈರಸ್ ನೀರಿನ ಪೈಪ್ ಲೀಕೇಜ್ ಆಗಿದ್ದ ಕಾರಣದಿಂದ ಹರಡಿತ್ತು. ಯಾಕಂದ್ರೆ ನೀರಿನ ಹನಿಗಳು ಏರೋಸಾಲ್ ಮೂಲಕ ಗಾಳಿಯಲ್ಲಿ ಹರಡಿತ್ತು ಹಾಗು ಇದೇ ಕಾರಣದಿಂದ ಆ ಸಾಂಕ್ರಾಮಿಕ ರೋಗ ವೇಗವಾಗಿ ಹಬ್ಬಿತ್ತು.
ಆದರೆ ಕೋವಿಡ್-19 ನ ಇಂಥಹ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಆದರೆ ವಿಜ್ಞಾನಿಗಳು ಹೇಳುವ ಪ್ರಕಾರ ಈ ವೈರಸ್ ಒಂದು ಫ್ಯಾಮಿಲಿಯ ಎಲ್ಲಾ ಪ್ಯಾಥೋಜನ್ ನಂತೆಯೇ ಪ್ರತಿಕ್ರಿಯಿಸುತ್ತವೆ. ನೀರಿನ ಹನಿಗಳಿಂದ ಗಾಳಿಯಲ್ಲಿ ಸೋಂಕು ಹರಡುವ ಈ ಪ್ರಕ್ರಿಯೆಯನ್ನ ಶೋವರ್ಹೆಡ್ಸ್ ಏರೋಸೋಲ್ ಟ್ರಾನ್ಸಮಿಷನ್ (showerhead aerosol transmission) ಎಂದು ಕರೆಯುತ್ತಾರೆ.
Comments are closed.