
ನವದೆಹಲಿ(ಏ.11): ಕೊರೋನಾ ವೈರಸ್ಗೆ ತತ್ತರಿಸಿದ ಅಮೆರಿಕಾದಲ್ಲಿ ಇದುವರೆಗೂ 40ಕ್ಕೂ ಹೆಚ್ಚು ಮಂದಿ ಭಾರತೀಯರು ಬಲಿಯಾಗಿದ್ದಾರೆ. ಜತೆಗೆ 1500ಕ್ಕೂ ಹೆಚ್ಚು ಭಾರತೀಯ ಎನ್ಆರ್ಐಗಳಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.
ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ರ್ ರೋಗವೂ ಇಡೀ ಜಗತ್ತಿನಾದ್ಯಂತ ಎಲ್ಲಾ ದೇಶಗಳಿಗೂ ವ್ಯಾಪಿಸಿದೆ. ಈ ಮಾರಕ ಕೊರೋನಾಗೆ ಚೀನಾ, ಇರಾನ್, ಇರಾಕ್ ದೇಶಗಳಂತೆಯೇ ಅಮೆರಿಕಾ ಕೂಡ ತತ್ತರಿಸಿ ಹೋಗಿದೆ. ಇದರ ಪರಿಣಾಮ ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷಕ್ಕೇರಿಕೆಯಾಗಿದೆ. ಅಂದರೆ ಇದುವರೆಗೂ 5,04,780 ಮಂದಿಗೆ ಕೊರೋನಾ ಸೋಂಕು ಬಂದಿದ್ದು, ಸುಮಾರು 18763 ಸಾವನ್ನಪ್ಪಿದ್ದಾರೆ. ಜತೆಗೆ 1531 ಸೋಂಕಿತರು ಗುಣಮುಖರಾಗಿದ್ದಾರೆ.
ಜಗತ್ತಿನಲ್ಲೇ ಅತೀ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿರುವ ಮೊದಲ ದೇಶ ಅಮೆರಿಕಾ. ಚೀನಾದಲ್ಲೂ ಕಾಣಿಸಿಕೊಂಡರೂ ಈ ರೋಗ ಶರ ವೇಗದಲ್ಲಿ ಹರಡುತ್ತಿರುವುದು ಮಾತ್ರ ಅಮೆರಿಕಾದಲ್ಲೇ ಎಂಬುದು ವಾಸ್ತವ. ಇದಕ್ಕೆ ಸಾಕ್ಷಿಯೇ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೋನಾ ಬಂದಿರುವುದು.
ಇನ್ನು, ಅಮೆರಿಕಾದ ನ್ಯೂಯಾರ್ಕ್ನಲ್ಲಿ ಹೆಚ್ಚು ಸೋಂಕಿತರು ಇದ್ದಾರೆ. ಸುಮಾರು 1,59,937 ಜನರಿಗೆ ನ್ಯೂಯಾರ್ಕ್ನಲ್ಲಿ ಪಾಸಿಟಿವ್ ಬಂದಿದೆ. ಜತೆಗೆ ನ್ಯೂ ಜರ್ಸಿ, ಕ್ಯಾಲಿಫೋರ್ನಿಯಾ, ಮಿಚಿಗನ್ ನಗರಗಳು ಹೆಚ್ಚಿನ ಸೋಂಕಿತರನ್ನು ಹೊಂದಿವೆ.
Comments are closed.