ಕರಾವಳಿ

ಕೊರೋನ ಮುಂಜಾಗ್ರತೆ :ಶುಕ್ರವಾರದ ಜುಮಾ ನಮಾಝ್ ನಿಲ್ಲಿಸುವಂತೆ ಡಿಸಿ ಸೂಚನೆ

Pinterest LinkedIn Tumblr

ಮಂಗಳೂರು, ಮಾರ್ಚ್.24: ಕೊರೋನ ವೈರಸ್ ಹೆಚ್ಚುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಧಾರ್ಮಿಕ ಕೇಂದ್ರಗಳಲ್ಲಿ ಜನಜಂಗುಳಿ ಸೇರುವುದನ್ನು ನಿಯಂತ್ರಿಸಲು ಮುಂದಾಗಿರುವ ದ.ಕ.ಜಿಲ್ಲಾಡಳಿತವು ಮಾrc.31ರವರೆಗೆ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್ ಸಹಿತ ದಿನದ ಐದು ಬಾರಿಯ ನಮಾಝ್‌ಗಳನ್ನು ನಿಲ್ಲಿಸಲು ನಿರ್ದೇಶಿಸಿದೆ.

ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಈ ಬಗ್ಗೆ ಪ್ರಕಟನೆ ಹೊರಡಿಸಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಯ ಉಲ್ಲೇಖದಂತೆ ಎಲ್ಲರೂ ಮನೆಯಲ್ಲೇ ನಮಾಝ್ ನಿರ್ವಹಿಸ ಬೇಕು ಮತ್ತು ತುರ್ತು ಹೊರತುಪಡಿಸಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂದು ಸೂಚಿಸಿದ್ದಾರೆ.

Comments are closed.