ರಾಷ್ಟ್ರೀಯ

ಕೊರೊನಾ: ಶಿರ್ಡಿ ಸಾಯಿ ಬಾಬಾ ಮಂದಿರ ಬಂದ್‌

Pinterest LinkedIn Tumblr


ಪುಣೆ: ರಾಜ್ಯದ ಹೆಚ್ಚಿನ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶವನ್ನು ಮುಚ್ಚಲಾಯಿತು. ಇಂದಿನಿಂದ ಶಿರ್ಡಿ ಸಾಯಿಬಾಬಾ ದೇವಾಲಯದ ಆಡಳಿತವೂ ದೇವಾಲಯವನ್ನು ಮುಚ್ಚಲು ನಿರ್ಧರಿಸಿದೆ. ಕೊರೊನಾದ ಬಗ್ಗೆ ಹೆಚ್ಚುತ್ತಿರುವ ಭೀತಿ ಮತ್ತು ಅದರ ತಕ್ಷಣದ ಪರಿಣಾಮದ ಹಿನ್ನೆಲೆಯಲ್ಲಿ ದೇವಾಲಯ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಸರಕಾರ ವತಿಯಿಂದ ಎಲ್ಲ ರೀತಿಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸುದ್ಧಿಗೋಷ್ಠಿ ನಡೆಸಿ ಎಲ್ಲರೂ ಸಹಕರಿಸಬೇಕೆಂದು ಹೇಳಿದ್ದರು. ಅನಂತರ ರಾಜ್ಯದ ಅನೇಕ ದೇವಾಲಯಗಳು ಮುಚ್ಚಲು ನಿರ್ಧರಿಸಿತು.

ಪ್ರಸಕ್ತ ಶಿರ್ಡಿ ಸಾಯಿಬಾಬಾ ಮಂದಿರವು ಕೂಡ ಭಕ್ತಾದಿಗಳ ಬಗ್ಗೆ ಕಾಳಜಿ ವಹಿಸುತ್ತಾ ಮುಚ್ಚಲು ನಿರ್ಧರಿಸಿದೆ. ಮಾಹಿತಿಯ ಪ್ರಕಾರ, ಮಂದಿರದ ವತಿಯಿಂದ ಸಾರ್ವಜನಿಕ ಸಂಪರ್ಕಗಳು ಹಾಗೂ ಬಾಯೋಮೆಟ್ರಿಕ್‌ ಪದ್ಧತಿಯನ್ನು ರದ್ದುಗೊಳಿಸಿದೆ. ಮುಂದಿನ ದಿನಗಳಲ್ಲಿ, ಶಿರ್ಡಿ ನಗರಕ್ಕೆ ಬರುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದ್ದು, ಗುಡಿಪಾಡ್ವಾ ಮತ್ತು ರಾಮ್‌ ನವಮಿ ಪ್ರಮುಖ ದಿನಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಬಾಬಾ ದರ್ಶನಕ್ಕಾಗಿ ಆಗಮಿಸುತ್ತಾರೆ.ಕೊರೊನಾ ಸೋಂಕಿನಿಂದ ಭಕ್ತರಿಗೆ ಮತ್ತು ಹಲವಾರು ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಸರಕಾರದ ನಿರ್ದೇಶನಗಳನ್ನು ಅನುಸರಿಸಿ ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ದೇವಾಲಯವನ್ನು ಮುಚ್ಚುವ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಅಂತಿಮ ತೀರ್ಮಾನ ಕೈಗೊಂಡಿದೆ.

Comments are closed.