ಕರ್ನಾಟಕ

ಕೊರೊನಾ ಭೀತಿಯಿಂದ ಉಳಿದ ನೂರಾರು ಮಂದಿಯ ಪ್ರಾಣ

Pinterest LinkedIn Tumblr


ಹಾಸನ: ಹಾಸನದಲ್ಲಿ ಕೊರೊನಾ ಭೀತಿ ಹಲವರ ಜೀವ ಉಳಿಸಿದ್ದು, ಕೇಳಲು ವಿಚಿತ್ರವೆನಿಸಿದ್ರು ಸತ್ಯ. ಇಂದು ಬೆಳಿಗ್ಗೆ ಹಾಸನದಲ್ಲಿ ನಿರ್ಮಾಣ ಹಂತದ ಫ್ಲೈ ಓವರ್ ಕುಸಿದು ಬಿದ್ದಿದ್ದು, ಫ್ಲೈ ಓವರ ಕೆಳಗೆ ಯಾರೂ ಕುಳಿತುಕೊಳ್ಳದ ಕಾರಣ ಹಲವರ ಪ್ರಾಣ ಉಳಿದಿದೆ.

ಫ್ಲೈ ಓವರ್ ಸಮೀಪ ಹೊಟೇಲ್, ಕ್ಯಾಂಟೀನ್‌ಗಳು ತೆರೆದಿರುತ್ತಿದ್ದು, ಅಲ್ಲಿ ಸಾವಿರಾರು ಜನ ತಿಂಡಿಗೆ ಬರುತ್ತಿದ್ದು, ಫ್ಲೈ ಓವರ್ ಕೆಳಗಡೆ ನೂರಾರು ಜನ ವಿಶ್ರಾಂತಿ ಪಡೆಯುತ್ತಿದ್ದರು. ಆದ್ರೆ ಕೊರೊನಾ ಭೀತಿ ಹಿನ್ನೆಲೆ ಹಾಸನದಲ್ಲಿ ನಿನ್ನೆಯಿಂದ ರಸ್ತೆ ಬದಿ ಕ್ಯಾಂಟೀನ್ ತೆರೆಯದಂತೆ ಸೂಚಿಸಲಾಗಿದ್ದು, ಕ್ಯಾಂಟೀನ್‌ಗಳು ತೆರೆಯದ ಕಾರಣ, ಗ್ರಾಹಕರು ಬರದ ಕಾರಣ ಜನಸಂದಣಿ ಇಲ್ಲವಾಗಿತ್ತು. ಜನಸಂದಣಿ ಇದ್ದಾಗ ಫ್ಲೈ ಓವರ ಕುಸಿದಿದ್ದರೆ, ನೂರಾರು ಮಂದಿಯ ಪ್ರಾಣ ಹೋಗುತ್ತಿತ್ತು. ಕೊರೊನಾ ಭೀತಿಯಿಂದ ಹಲವರ ಪ್ರಾಣ ಉಳಿದಿದೆ.

ಫ್ಲೈ ಓವರ್‌ನ ಕಾಮಗಾರಿಯ ಗುದ್ದಲಿ ಪೂಜೆ ನಾ ಮಾಡಬೇಕು ತಾ ಮಾಡಬೇಕು ಎಂದು ಜೆಡಿಎಸ್- ಬಿಜೆಪಿ ಕಿತ್ತಾಡಿಕೊಂಡಿದ್ದರು. ಇದೀಗ ಫ್ಲೈಓವರ್ ಕುಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬರದ ಕಾರಣ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Comments are closed.