ಉಡುಪಿ: ಕೇಂದ್ರ ರೈಲ್ವೇ(ರಾಜ್ಯ) ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಹೊಸ ಯಶವಂತಪುರ- ವಾಸ್ಕೋ ರೈಲಿಗೆ ಮಂಜೂರಾತಿ ನೀಡಿದ್ದಕ್ಕಾಗಿ ಕರಾವಳಿಯ ಸಮಸ್ತ ನಾಗರಿಕರ ಪರವಾಗಿ ಸಚಿವರನ್ನು ವಿಶೇಷವಾಗಿ ಅಭಿನಂದಿಸಿದರು.ಈ


ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಜಿಲ್ಲೆಯ ಜನತೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಬೆಂಗಳೂರಿನಿಂದ ರಾತ್ರಿಯ ವೇಳೆ ಜಿಲ್ಲೆಗೆ ಹೊರಡುವಂತಹ ಹೊಸ ರೈಲನ್ನು ಘೋಷಿಸುವಂತೆ ರೈಲ್ವೆ ಸಚಿವರನ್ನು ಸಂಸದರು ಕೇಳಿಕೊಂಡರು.
ಯಶವಂತಪುರ-ವಾಸ್ಕೋ ರೈಲಿನ ಉದ್ಘಾಟನೆ, ವೇಳಾಪಟ್ಟಿ, ಪ್ರಸ್ತುತ ಚಿಕ್ಕಮಗಳೂರು-ಬೆಂಗಳೂರು ರೈಲಿನ ವೇಗವನ್ನು ಹೆಚ್ಚಿಸುವ ಕುರಿತು ಹಾಗೂ ಕ್ಷೇತ್ರದ ಇತರೆ ಹಲವಾರು ರೈಲ್ವೆ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸಂಸದರು ಸಚಿವರಿಗೆ ಸಲ್ಲಿಸಿದರು ಎಂದು ಪ್ರಕಟಣೆ ತಿಳಿಸಿದೆ.
Comments are closed.