ಕರಾವಳಿ

ಜಿಲ್ಲಾ ಗೃಹರಕ್ಷಕದ ದಳದ ಸಮಾದೇಷ್ಟರಾಗಿ ಡಾ. ಚೂಂತಾರು ಪುನರಾಯ್ಕೆ

Pinterest LinkedIn Tumblr

ಮಂಗಳೂರು ಮಾರ್ಚ್ 03 : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದ ದಳದ ಸಮಾದೇಷ್ಟರಾಗಿ ಡಾ.ಮುರಲೀ ಮೋಹನ್ ಚೂಂತಾರು ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.

ಡಾ.ಚೂಂತಾರು ಇವರನ್ನು ಎರಡನೇ ಅವಧಿಗೆ ಜನವರಿ 6 ರಿಂದ ಮುಂದಿನ 5 ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.

ಡಾ. ಮುರಲೀ ಮೋಹನ್ ಚೂಂತಾರು ಇವರು ಮಂಗಳೂರಿನ ಬಿಜೈ ಸಮೀಪದ ಕಾಪಿಕಾಡು ನಿವಾಸಿಯಾಗಿದ್ದು, ವೃತ್ತಿಯಲ್ಲಿ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Comments are closed.