ಮುಂಬೈ

ದುಬೈನಿಂದ ಗುದನಾಳದಲ್ಲಿ ಚಿನ್ನವನ್ನು ಇಟ್ಟುಕೊಂಡು ಬಂದಿದ್ದ ಮಹಿಳೆ

Pinterest LinkedIn Tumblr


ಮುಂಬೈ: 20 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ಗುದನಾಳದಲ್ಲಿ ಇಟ್ಟು ಸಾಗಿಸುತ್ತಿದ್ದ ಮಹಿಳೆಯನ್ನು ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಈ ಬಗ್ಗೆ ಏರ್​ಪೋರ್ಟ್​ನ ಕಸ್ಟಮ್​ ಆಫೀಸ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮುಂಬೈನ ಮರಿಯಮ್ ಮೊಹಮ್ಮದ್ ಸಲೀಮ್ ಶೇಖ್ ಎಂಬ ಮಹಿಳೆ ದುಬೈನಿಂದ ವಿಶೇಷ ವಿಮಾನದಲ್ಲಿ ಬಂದು ಪುಣೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿದಿದ್ದರು. ಅವರ ಬಳಿ ನಿಷಿದ್ಧ ಸರಕುಗಳು ಇರುವ ಬಗ್ಗೆ ಅದಾಗಲೇ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.

ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಚಾರಣೆ ನಡೆಸಿದಾಗ ಗುದನಾಳದಲ್ಲಿ ಚಿನ್ನ ಇದ್ದುದು ಗೊತ್ತಾಗಿದೆ. ಈ ಚಿನ್ನ ಮಾತ್ರೆಗಳ ರೂಪದಲ್ಲಿ ಇದ್ದು, ಅದನ್ನು ಕಪ್ಪು ಟೇಪ್​ನಿಂದ ಮುಚ್ಚಲಾಗಿತ್ತು. ಒಟ್ಟು ಮೂರು ಮಾತ್ರೆಯಾಕಾರದ ಚಿನ್ನದ ತುಂಡುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments are closed.