ಕರಾವಳಿ

ತುಳು ಕಾವ್ಯಯಾನ’ ಅಭಿಯಾನದಲ್ಲಿ ಅಸೆನಿಯಾಗೊ ಕಾಂತಗೊ ಜೋಗಿ ತುಳು ಕಾವ್ಯಯಾನ

Pinterest LinkedIn Tumblr

ಮಂಗಳೂರು: ತುಳುವರ್ಲ್ಡ್ ಮಂಗಳೂರು ಆಶ್ರಯದಲ್ಲಿ ಆಯೋಜಿಸಿದ ‘ತುಳು ಕಾವ್ಯಯಾನ’ ಅಭಿಯಾನದ ದ್ವಿತೀಯ ಕಾರ್ಯಕ್ರಮ ನಗರದ ಪೋಲೀಸ್ ಲೇನ್ ನ ಮುನೀಶ್ವರ ಮಹಾ ಗಣಪತಿ ದೇವಸ್ಥಾನ ಸಭಾಂಗಣದಲ್ಲಿ ಜರಗಿತು.

ಹಿರಿಯ ಬೇಟೆ ಸಾಹಿತಿ ದಿ.ಕೆದಂಬಾಡಿ ಜತ್ತಪ್ಪ ರೈ ಅವರು ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ ಕಥೆಯನ್ನಾಧರಿಸಿ ರಚಿಸಿದ ‘ಅಸೆನಿಯಾಗೊ ಕಾಂತಗೊ ಜೋಗಿ’ ತುಳು ಕಾವ್ಯವನ್ನು ಯಕ್ಷಗಾನ ಅರ್ಥಧಾರಿ – ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನಿಸಿದರು. ಯುವ ಭಾಗವತರಾದ ಪ್ರಶಾಂತ ರೈ ಪುತ್ತೂರು ಮತ್ತು ಅಮೃತಾ ಅಡಿಗ ಯಕ್ಷಗಾನ ಧಾಟಿಯಲ್ಲಿ ಕಾವ್ಯ ವಾಚನ ಮಾಡಿದರು. ಕೌಶಲ್ ಮದ್ದಳೆಯಲ್ಲಿ ಸಹಕರಿಸಿದರು.

ತುಳುವರ್ಲ್ಡ್ ಅಧ್ಯಕ್ಷ ಡಾ.ರಾಜೇಶ್ ಆಳ್ವ ಕಲಾವಿದರನ್ನು ಪರಿಚಯಿಸಿದರು. ತೋನ್ಸೆ ಪುಷ್ಕಳ ಕುಮಾರ್, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಕಾಸರಗೋಡು ಅಶೋಕ್ ಕುಮಾರ್ ಸ್ಮರಣಿಕೆಯಿತ್ತು ಗೌರವಿಸಿದರು.

Comments are closed.