ರಾಷ್ಟ್ರೀಯ

ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ; ಕೇಂದ್ರ ಮಾಜಿ ಸಚಿವಗೆ ಜಾಮೀನು

Pinterest LinkedIn Tumblr


ನವದೆಹಲಿ: ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ ಕೇಂದ್ರ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯನಂದಗೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ ಎಂದು ವರದಿ ತಿಳಿಸಿದೆ.

ಷಹಜಹನಾಪುರ್ ಕಾನೂನು ಕಾಲೇಜಿನ ಟ್ರಸ್ಟಿ ಚಿನ್ಮಯಾನಂದ ವಿರುದ್ಧ ಕಾನೂನು ವಿದ್ಯಾರ್ಥಿನಿ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ 2019ರ ಸೆಪ್ಟೆಂಬರ್ 20ರಂದು ಸ್ವಾಮಿ ಚಿನ್ಮಯಾನಂದ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಐಪಿಸಿ ಸೆಕ್ಷನ್ 376ಸಿ (ಲೈಂಗಿಕ ಸಂಬಂಧ), 372 (ಅಕ್ರಮ ನಿರ್ಬಂಧ), 345ಡಿ(ಹಿಂಬಾಲಿಸುವುದು) ಮತ್ತು 506(ಅಪರಾಧಕ್ಕೆ ಕುಮ್ಮಕ್ಕು)ರ ಪ್ರಕಾರ ಪ್ರಕರಣ ದಾಖಲಿಸಿದ್ದರು.

ಸುಮಾರು ಒಂದು ವರ್ಷಗಳ ಕಾಲ ಕೇಂದ್ರ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದಾ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಿರುವುದಾಗಿ 23 ವರ್ಷದ ಕಾನೂನು ವಿದ್ಯಾರ್ಥಿನಿ ಆರೋಪಿಸಿದ್ದಳು. ನಂತರ ವಿದ್ಯಾರ್ಥಿನಿಯ ಮತ್ತು ಆಕೆಯ ಮೂವರು ಗೆಳಯರ ವಿರುದ್ಧ ಸುಲಿಗೆ ಆರೋಪದ ದೂರು ದಾಖಲಿಸಲಾಗಿತ್ತು. ಯುವತಿಯನ್ನು ಚಿನ್ಮಯಾನಂದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೊಲೀಸರು ಬಂಧಿಸಿದ್ದರು. 2019ರ ಡಿಸೆಂಬರ್ 11ರಂದು ಕಾನೂನು ವಿದ್ಯಾರ್ಥಿನಿ ಜಾಮೀನಿನ ಮೇಲೆ ಹೊರಬಂದಿದ್ದಳು.

Comments are closed.