ಕರ್ನಾಟಕ

ಸ್ಟಾರ್ ಹೋಟೆಲ್‍ನಲ್ಲಿ ದಿಂಬಿನ ಬಳಿ ಇಟ್ಟಿದ್ದ 50 ಗ್ರಾಂ ಚಿನ್ನದ ಚೈನ್ ಕಳೆದುಕೊಂಡ ದಂಪತಿ

Pinterest LinkedIn Tumblr


ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರವಾಸಕ್ಕೆ ಬಂದ ಗುಜರಾತ್ ದಂಪತಿಯ ಚಿನ್ನ ಕಳುವಾಗಿರುವ ಘಟನೆ ಅಶೋಕ ಹೋಟೆಲ್‍ನಲ್ಲಿ ನಡೆದಿದೆ.

ಗುಜರಾತ್ ಕುಶಾಂಗ್ರ ಶರ್ಮ ದಂಪತಿ ಡಿಸೆಂಬರ್ 28 ರಂದು ದಿ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ತಂಗಿದ್ದರು. ರಾತ್ರಿ ಊಟಕ್ಕೆ ರೂಂನಿಂದ ಹೊರಬಂದಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಚೈನ್, ಎರಡು ಲಾಕೆಟ್, ರುದ್ರಾಕ್ಷ ಚೈನ್ ಅನ್ನು ದಿಂಬಿನ ಬಳಿ ಇಟ್ಟು ಬಂದಿದ್ದರು. ಕತ್ತಲ್ಲಿ ಚೈನ್ ಇಲ್ಲದೆ ಇರುವುದು ಗಮನಕ್ಕೆ ಬರುತ್ತಿದ್ದಂತೆ ದಂಪತಿ ವಾಪಸ್ ರೂಂಗೆ ಹೋಗಿ ನೋಡಿದಾಗ, ಆಭರಣಗಳು ಕಳುವಾಗಿರುವುದು ಗೊತ್ತಾಗಿದೆ.

ಹೋಟೆಲ್ ಮ್ಯಾನೇಜ್‍ಮೆಂಟ್‍ನವರ ಜೊತೆ ಇಡೀ ರೂಮ್ ಪೂರ್ತಿ ತಡಕಾಡಿದರೂ ಚಿನ್ನಾಭರಣ ಪತ್ತೆಯಾಗಿಲ್ಲ. ಹೀಗಾಗಿ ಕುಶಾಂಗ್ರ ಶರ್ಮ ಅಶೋಕ ಹೋಟೆಲ್ ಹೌಸ್ ಕೀಪಿಂಗ್ ಸಿಬ್ಬಂದಿ ಚಿನ್ನಾಭರಣ ಕದ್ದಿರಬಹುದು ಅಂತ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಟಾರ್ ಹೋಟೆಲ್‍ಗಳಲ್ಲೇ ಈ ರೀತಿ ಆಗುತ್ತೆ ಅಂದ್ರೆ, ಬೇರೆ ಹೋಟೆಲ್‍ಗಳ ಕಥೆಯೇನು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸರು ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

Comments are closed.