ಕರ್ನಾಟಕ

ಸಾರ್ವಜನಿಕ ಆಸ್ತಿ ನಾಶಪಡಿಸಿದರೆ ಕಂಡಲ್ಲಿ ಗುಂಡಿಕ್ಕಿ; ಕೇಂದ್ರ ಸಚಿವ

Pinterest LinkedIn Tumblr


ಹುಬ್ಬಳ್ಳಿ(ಡಿ.17): ಪೌರತ್ವ ಕಾಯ್ದೆ ವಿರೋಧಿ ಹೋರಾಟ ಕಾಂಗ್ರೆಸ್ ಕುತಂತ್ರವಾಗಿದ್ದು, ಪೌರತ್ವ ಕಾಯ್ದೆ ವಿರೋಧಿಸಿ ರೈಲ್ವೆ ಇಲಾಖೆ ಸೇರಿದಂತೆ ಇತರೆ ಸಾರ್ವಜನಿಕ ಆಸ್ತಿ ನಾಶಪಡಿಸಿದರೆ ಕಂಡಲ್ಲಿ ಗುಂಡಿಕ್ಕಿ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯಿಂದ ಯಾವುದೇ ಭಾರತೀಯನಿಗೆ ತೊಂದರೆಯಿಲ್ಲ. ನೆರೆ ರಾಷ್ಟ್ರಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅನುಕೂಲ ಕಲ್ಪಿಸಲು ಕಾಯ್ದೆ ತರಲಾಗಿದೆ. ಇದನ್ನು ವಿರೋಧಿಸುತ್ತಿರುವವರ ವಿರುದ್ಧ ಆಯಾ ರಾಜ್ಯಗಳ‌ ಗೃಹ ಸಚಿವರು ಕಠಿಣ ಕ್ರಮಕ್ಕೆ‌ ಮುಂದಾಗಬೇಕು ಎಂದರು.

ನಷ್ಟವಾಗಿರುವುದು ಜನರ ತೆರಿಗೆ ದುಡ್ಡು. ಒಂದು ರೈಲು ಅಭಿವೃದ್ಧಿಪಡಿಸಲು ವರ್ಷಗಳೇ ಹಿಡಿಯುತ್ತವೆ. ಸಾರ್ವಜನಿಕ ಆಸ್ತಿಗೆ ಯಾರಾದರೂ ಕಲ್ಲು ತೂರಾಟ ನಡೆಸಿದ್ದಲ್ಲಿ, ಸರ್ದಾರ್​ ವಲ್ಲಭಾಯ್​ ಪಟೇಲ್​ ರೀತಿಯಲ್ಲಿ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಕೆಲ ಸಮುದಾಯ ಅನಾವಶ್ಯಕವಾಗಿ ತೊಂದರೆಗಳನ್ನು ಸೃಷ್ಟಿಸುತ್ತಿವೆ. ರೈಲ್ವೆ ಇಲಾಖೆ ಸೇರಿದಂತೆ ಇತರೆ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದರೆ ಜಿಲ್ಲಾಡಳಿತ ಕಂಡಲ್ಲಿ ಗುಂಡಿಕ್ಕಬೇಕು ಎಂದು ಹೇಳಿದರು.

ಈ ಭಾಗದ ಉದ್ಯೋಗಾಂಕ್ಷಿಗಳಿಗೆ ಅನುಕೂಲಕ್ಕಾಗಿ ರೈಲ್ವೇ ನೇಮಕಾತಿ ಬೋರ್ಡ್ ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಕನ್ನಡಿಗ ಉದ್ಯೋಗಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ ರೈಲು ಒದಗಿಸುವ ಸಿದ್ಧತೆ ನಡೆಯುತ್ತಿದೆ. ಐದು ಗಂಟೆಯೊಳಗೆ ತಲುಪುವ ಹುಬ್ಬಳ್ಳಿ- ಬೆಂಗಳೂರು ರೈಲು. ಮೊದಲು ಪ್ರಯೋಗಿಕವಾಗಿ ಚಾಲನೆ ನೀಡಲಾಗುವುದು‌. ಬೀದರ್- ಬೆಳಗಾವಿ, ಬೆಂಗಳೂರು- ಮಂಗಳೂರು ನೂತನ ರೈಲು ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.

ಯಾವುದೇ ಅಡತಡೆ ಇಲ್ಲದೇ ನೇಮಕಾತಿ : ಜೋಶಿ

ರೈಲ್ವೆ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಉದ್ಯೋಗಾಂಕ್ಷಿಗಳಿಗೆ ಯಾವುದೇ ಅಡತಡೆ ಇಲ್ಲದೇ ನೇಮಕಾತಿ ನಡೆಸಲಾಗುತ್ತಿದೆ. 50 ಲಕ್ಷ ಕೋಟಿ ರೈಲ್ವೆಯಲ್ಲಿ ಹೂಡಿಕೆಗೆ ಕೇಂದ್ರ ಅವಕಾಶ ನೀಡಿದೆ. ಮುಂದಿನ 10 ವರ್ಷದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ರೈಲ್ವೆ ಕ್ಷೇತ್ರದಲ್ಲಿ ಆಗಲಿದೆ. ಇದರಿಂದ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು.

ರೈಲ್ವೆ ಅಂಡರ್ ಪಾಸ್ ಗಳಲ್ಲಿ ನೀರು ತುಂಬಿಕೊಂಡು ಜನ ಓಡಾಡಲು ತೊಂದರೆಯಾಗುತ್ತಿದೆ. ನಾನೇ ನಿಮಗ ಕರೆಮಾಡಿ ವಿಚಾರ ತಿಳಿಸಿದ್ದೇನೆ. ಪ್ರತಿ ಸಾರಿ ಕರೆ ಮಾಡಿ ತಿಳಿಸಲು ಆಗಲ್ಲ ಎಂದು ಅಸಮಾಧಾನ. ವ್ಯಕ್ತೊಡಿಸಿದ ಸಚಿವರು, ನೀವೇ ನಿರ್ಮಿಸಿದ ಅಂಡರಪಾಸ್ ಗಳ ನಿರ್ವಹಣೆ ಯಾಕೆ ಮಾಡುತ್ತಿಲ್ಲ ? ಆ ಬಗ್ಗೆ ಕೂಡಲೇ ಗಮನ ಹರಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸಚಿವರು ಸೂಚನೆ ನೀಡಿದರು.

ಹುಬ್ಬಳ್ಳಿ -ಬೆಂಗಳೂರು ಎಕ್ಸ್‌ಪ್ರೆಸ್‌ ತಡೆರಹಿತ ರೈಲು , ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳ ಅಭಿವೃದ್ಧಿ ‌ಪೋರ್ಟ್ ಅಗತ್ಯವಿದ್ದು, ಬೆಲಿಕೇರಿ ಪೋರ್ಟ್ ಅಭಿವೃದ್ಧಿ ಪಡಿಸಲು ಇಬ್ಬರು ಕೇಂದ್ರ ಸಚಿವರಿಗೆ ವೇದಿಕೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​​​ ಒತ್ತಾಯಿಸಿದರು.

Comments are closed.