ರಾಷ್ಟ್ರೀಯ

4 ತಿಂಗಳೊಳಗೆ ಆಕಾಶದೆತ್ತರ ರಾಮಮಂದಿರ ನಿರ್ಮಾಣ; ಅಮಿತ್ ಶಾ

Pinterest LinkedIn Tumblr


ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇನ್ನು ನಾಲ್ಕು ತಿಂಗಳೊಳಗೆ ಆಕಾಶದೆತ್ತರದಷ್ಟು ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಜಾರ್ಖಂಡ್ ನ ಪಾಕೂರ್ ನಲ್ಲಿ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅಂತಿ ತೀರ್ಪನ್ನು ಪ್ರಕಟಿಸಿದೆ. ಇನ್ನು ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದರು.

ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬುದು ಶತಮಾನಗಳಿಂದ ಪ್ರತಿಯೊಬ್ಬ ಭಾರತೀಯನ ಬೇಡಿಕೆಯಾಗಿತ್ತು. ಆದರೆ ಈ ಪ್ರಕರಣ ಕಾಂಗ್ರೆಸ್ ನಿಂದಾಗಿ ವಿಳಂಬವಾಯಿತು. ಅಯೋಧ್ಯೆ ವಿವಾದ ಪ್ರಕರಣವನ್ನು ಶೀಘ್ರವೇ ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂನಲ್ಲಿ ಮನವಿ ಮಾಡಿಕೊಂಡಿದ್ದರು ಎಂದು ಹೇಳಿದರು.

ನಾನೀಗ ಈ ಮೂಲಕ ಘೋಷಿಸುತ್ತಿದ್ದೇನೆ..ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಾಣ ಮಾಡಲು ಆದೇಶ ನೀಡಿದ ದಿನದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯುತ್ತಿದ್ದು, ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಮಮಂದಿರ ಹಾಗೂ ಕಾಶ್ಮೀರ ವಿಚಾರದಂತಹ ರಾಷ್ಟ್ರೀಯ ವಿಚಾರದಲ್ಲಿ ಜಾರ್ಖಂಡ್ ಜನರು ಏನೂ ಮಾಡಲಿಲ್ಲ ಎಂಬ ಮಹಾಘಟಬಂಧನ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಜೆಎಂಎಂನ ಹೇಮಂತ್ ಸೋರೆನ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ರಾಷ್ಟ್ರೀಯ ವಿಚಾರಗಳಿಗೆ ಜಾರ್ಖಂಡ್ ಜನತೆ ಯಾಕೆ ಕಳವಳ ವ್ಯಕ್ತಪಡಿಸಬೇಕು ಎಂದು ಪ್ರಶ್ನಿಸಿದರು.

Comments are closed.