
ಲಕ್ನೋ: ಮದುವೆಗೆ ವರ ತಡವಾಗಿ ಬಂದಿದ್ದಕ್ಕೆ ಬೇಸರಗೊಂಡ ವಧುವಿನ ಕುಟುಂಬಸ್ಥರು ಬೇರೊಬ್ಬನ ಜೊತೆ ವಿವಾಹವನ್ನು ಸಾಂಗವಾಗಿ ನೆರವೇರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ನಿಶ್ಚಯವಾಗಿದ್ದ ಮದುವೆಗೆ ವರ ತಡವಾಗಿ ಬಂದಿದ್ದು, ಈ ವೇಳೆ ವಧುವಿನ ಕೊರಳಲ್ಲಿ ಮಾಂಗಲ್ಯ ಸರ ಕಂಡು ಕಂಗಾಲಾಗಿದ್ದಾನೆ. ಈ ಬಗ್ಗೆ ಯುವತಿಯ ಕುಟುಂಬಸ್ಥರಲ್ಲಿ ಪ್ರಶ್ನಿಸಿದಾಗ ತುಂಬಾ ಸಮಯ ಕಾದರೂ ವರನ ಕಡೆಯವರು ಯಾರು ಬರಲಿಲ್ಲವಾದ್ದರಿಂದ ಬೇರೊಬ್ಬನ ಜೊತೆ ವಿವಾಹ ಮಾಡಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.
ಆದದ್ದೇನು ?
ಉತ್ತರ ಪ್ರದೇಶದ ಬಿಜ್ನೋರ್ನ ಮದುವೆ ಮಂಟಪದಲ್ಲಿ ವಿವಾಹಕ್ಕೆ ಸಿದ್ದತೆ ನಡೆದಿತ್ತು. ಮಂಟಪ ಕೂಡ ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ ಮುಖ್ಯವಾಗಿ ಮದುವೆ ಗಂಡು ಮತ್ತು ಆತನ ಕುಟುಂಬಸ್ಥರು ಇನ್ನೂ ಬಂದಿರಲಿಲ್ಲ. ವಧುವಿನ ಕಡೆಯವರು ತುಂಬಾ ಸಮಯ ಕಾದರೂ ಸಹ ವರನ ಕಡೆಯವರು ಮದುವೆ ಮಂಟಪಕ್ಕೆ ಬರಲೇ ಇಲ್ಲ.
ಕಾದು ಕಾದು ಸುಸ್ತಾಗಿ ವಧು ಮದುವೆ ನಿಶ್ಚಯವಾಗಿದ್ದ ಹುಡುಗನನ್ನು ತಿರಸ್ಕರಿಸಿ, ಕೊನೆಗೆ ಅದೇ ಮಂಟಪದಲ್ಲಿ, ಅದೇ ಮುಹೂರ್ತದಲ್ಲಿ ಬೇರೆ ಹುಡುಗನನ್ನು ಮದುವೆಯಾಗಿದ್ದಾಳೆ. ಈ ವೇಳೆ ವರನ ಕಡೆಯಯವರು ಹೆಚ್ಚಿನ ವರದಕ್ಷಿಣೆಯಾಗಿ ಬೈಕ್ ಮತ್ತು ಹಣ ಕೇಳಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ನಾವು ಅಷ್ಟು ಹಣ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಅದ್ದರಿಂದ ಬೇರೊಬ್ಬನ ಜೊತೆ ವಿವಾಹ ನೆರವೇರಿಸಿದ್ದೇವೆ ಎಂದು ಯುವತಿಯ ಕಡೆಯವರು ತಿಳಿಸಿದ್ದಾರೆ.
Comments are closed.