ಕರ್ನಾಟಕ

ಹನುಮ-ಅಯ್ಯಪ್ಪ ಮಾಲಾದಾರಿಗಳಿಗೆ ಪ್ರಸಾದ ವಿತರಿಸಿ ಭಾವೈಕ್ಯತೆಗೆ ಸಾಕ್ಷಿಯಾದ ಮುಸ್ಲಿಮರು

Pinterest LinkedIn Tumblr

ಹೊಸಪೇಟೆ: ಹಿಂದೂ-ಮುಸಲ್ಮಾನರ ಮಧ್ಯೆ ಸೌಹಾರ್ದತೆಗೆ ಇದೊಂದು ದೊಡ್ಡ ಸಾಕ್ಷಿ. ಕೇವಲ ಹೇಳುವುದಕ್ಕಷ್ಟೇ ಅಲ್ಲ ಇಲ್ಲಿನ ಮುಸ್ಲಿಮರು ತಮ್ಮ ನಡವಳಿಕೆಯಲ್ಲಿಯೂ ಭಾವೈಕ್ಯತೆ ಮೆರೆದಿದ್ದಾರೆ. ಹನುಮ ಮಾಲಾದಾರಿಗಳು ಹಾಗೂ ಅಯ್ಯಪ್ಪ ಮಾಲಾದಾರಿಗಳಿಗೆ ಪ್ರಸಾದ ವಿತರಿಸುವ ಮೂಲಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ರಾಜಭಾಗ ಸವಾರ್ ದರ್ಗಾದಲ್ಲಿರುವ ಮುಸ್ಲಿಮರು ಭ್ರಾತೃತ್ವ ಸಾರಿದ್ದಾರೆ.

ಬಳ್ಳಾರಿ, ಗದಗ ಮತ್ತು ದಾವಣೆಗೆರೆ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿರುವ ರಾಜಭಾಗ ಸವಾರ್ ದರ್ಗಾದಲ್ಲಿ ಕಳೆದ ರಾತ್ರಿ ಮುಸ್ಲಿಮರ ಯುವಕರ ಪಡೆಯೊಂದು ಹನುಮ ಮಾಲಾದಾರಿಗಳು ಮತ್ತು ಅಯ್ಯಪ್ಪ ಮಾಲಾದಾರಿಗಳಿಗೆ ಪ್ರಸಾದ ವಿತರಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಕೇವಲ ಮುಸ್ಲಿಮರಷ್ಟೇ ಅಲ್ಲ ಇಲ್ಲಿನ ಹಿಂದೂಗಳೂ ಕೂಡ ಮುಸ್ಲಿಮರು ಆಚರಿಸುವ ರಂಜಾನ್ ಉಪವಾಸ ಸಂದರ್ಭದಲ್ಲಿ ಇಪ್ತಿಯಾರ್ ಕೂಡ ನೀಡುತ್ತಾರೆ.

ಈ ಮೂಲಕ ಇಲ್ಲಿನ ಹಿಂದೂ ಹಾಗೂ ಮುಸ್ಲಿಮರು ಹೊಸ ಪದ್ಧತಿಗೆ ನಾಂದಿ ಹಾಡಿದ್ದು, ಭಾವೈಕ್ಯತೆಯ ಕೇಂದ್ರದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಿದ್ದಾರೆ.

Comments are closed.