ರಾಜ್ಯದಲ್ಲಿ ಪ್ರಥಮ ಬಾರಿಗೆ ಚಿಟ್ಟೆಗಳ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಡಿಸೆಂಬರ್ 14 ಮತ್ತು 15ರಂದು ಬೆಂಗಳೂರು ಬಟರ್ಫ್ಲೈ ಕ್ಲಬ್ (ಬಿಬಿಸಿ) ಸಹಕಾರದೊಂದಿಗೆ ಗಣತಿ ಕಾರ್ಯ ನಡೆಯಲಿದೆ.
ಚಿಟ್ಟೆಗಳ ಸಾಮಾನ್ಯ ಹೆಸರು, ರೂಪ, ಜೀವನ ಚಕ್ರ, ಬಣ್ಣ, ಪ್ರಭೇದ, ಚಿಟ್ಟೆ ಗುರುತಿಸಲು ಹಾಗೂ ಉದ್ಯಾನವನ ನಿರ್ಮಾಣಕ್ಕೆ ಬೇಕಾಗುವ ಪೂರಕ ಅಂಶ, ರೆಕ್ಕೆಗಳ ವಿಸ್ತೀರ್ಣ ಮತ್ತಿತರಗಳನ್ನುಗಣತಿ ಒಳಗೊಂಡಿದೆ. ಚಿಟ್ಟೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ವಿಶೇಷ ತಜ್ಞರ ತಂಡವನ್ನೂ ರಚಿಸಲಾಗುವುದು. ಈ ತಂಡವು ಚಿಟ್ಟೆಗಳ ಪ್ರಭೇದಗಳ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಲಿದೆ.
ನೂರಾರು ಪ್ರಭೇದ: ಜುನೋನಿಯಾ ಐಸಿಟಾ (ಕಂದೂ ಹೂವು ಚಿಟ್ಟೆ), ಬೂನಾನಿಯಾ ಅಟ್ಲೈಟ್ಸ್ (ಬೂದಿಹೂವು ಚಿಟ್ಟೆ), ಬೂನಾನಿಯಾ ಅಲ್ಮಾನಾ (ನವಿಲುಹೂವು), ಬೂನಾನಿಯಾ ಓರಿಥ್ಯಾ (ನಿಂಬೆ ಹೂವು ಚಿಟ್ಟೆ) ಹಳದಿ ಹೂವು ಚಿಟ್ಟೆ, ನಿಂಪ್ಯಾಲಿಡೇ ಫ್ಯಾನ್ಸಿ ಚಿಟ್ಟೆ ಸೇರಿ ರಾಜ್ಯಾದ್ಯಂತ ನೂರಾರು ಪ್ರಭೇದದ ಚಿಟ್ಟಿಗಳಿವೆ ಎಂದು ಅಂದಾಜಿಸಲಾಗಿದೆ. ಇದುವರೆಗೂ ಅವುಗಳ ಸಮೀಕ್ಷೆ ನಡೆದಿಲ್ಲ.
ದಾಂಡೇಲಿ ರಾಷ್ಟ್ರೀಯ ಉದ್ಯಾನದಲ್ಲಿ ಚಿಟ್ಟೆ ಉದ್ಯಾನ ನಿರ್ವಿುಸಿ ಅವುಗಳ ಸಂತಾನೋತ್ಪತ್ತಿ ಕ್ರಮವನ್ನು ಅಧ್ಯಯನ ಮಾಡಿ ಚಿಟ್ಟೆಗಳ ಸಂಖ್ಯೆ ಹೆಚ್ಚಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಅಳಿವಿನಂಚಿನಲ್ಲಿರುವ ರಾಜ್ಯದ ಚಿಟ್ಟೆಗಳ ಸಂತತಿ ಸಂರಕ್ಷಿಸಲು ಚಿಟ್ಟೆಗಳ ಗಣತಿ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಗ್ರೇಟ್ ಇಂಡಿಯನ್ ಬಸ್ಟರ್ಡ್ ಎಂಬ ಚಿಟ್ಟೆ ಗುರುತಿಸಲಾಗಿದೆ. ಮತ್ತಷ್ಟು ವಿವಿಧ ಜಾತಿಯ ಚಿಟ್ಟೆಗಳನ್ನು ಸಂಶೋಧಿಸಲಾಗುತ್ತದೆ.

Comments are closed.