ರಾಷ್ಟ್ರೀಯ

ಕ್ರಿಮಿನಲ್‌ನನ್ನು ಬಂಧಿಸಲು ಮದುವೆಯಾಗುವ ಆಮಿಷ ತೋರಿಸಿದ ಮಹಿಳಾ ಪೊಲೀಸ್‌!

Pinterest LinkedIn Tumblr


ಭೋಪಾಲ್‌: ಮಧ್ಯಪ್ರದೇಶದ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಳ್ಳನೊಬ್ಬನನ್ನು ಹಿಡಿದಿದ್ದಾರೆ. ಅಪರಾಧಿಗೆ ಮಹಿಳಾ ಪೊಲೀಸ್‌ ಮದುವೆಯಾಗುವ ಆಮಿಷ ತೋರಿ ಆತನನ್ನು ಖೆಡ್ಡಾಗೆ ಬೀಳಿಸಿದ್ದಾರೆ. ಬಿಜೌರಿ ಗ್ರಾಮದ ನಿವಾಸಿ ಬಾಲಕೃಷ್ಣ ಚುಬೆ ವಿರುದ್ಧ 16 ಕ್ರಿಮಿನಲ್‌ ಕೇಸುಗಳಿವೆ.

ಆತನ ತಲೆಗೆ 10,000 ರೂ. ಬಹುಮಾನ ಘೋಷಿಸಲಾಗಿತ್ತು. ಆತನನ್ನು ಸೆರೆಹಿಡಿಯಲು ನಡೆಸಿದ ಪ್ರಯತ್ನವೆಲ್ಲ ವಿಫ‌ಲವಾಗಿತ್ತು. ಆತ ಮದುವೆಯಾಗಲು ಹುಡುಗಿ ಹುಡುಕುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು, ಮಹಿಳಾ ಪೇದೆಯನ್ನೇ ಈ ಕೆಲಸಕ್ಕೆ ಬಳಸಿದ್ದಾರೆ. ಮೊದಲಿಗೆ ದೆಹಲಿಯಲ್ಲಿ ಕಾರ್ಮಿಕಳಾಗಿರುವ ಬುಂದೇಲ್‌ಖಂಡ್‌ ಮೂಲದ ಮಹಿಳೆಯ ಹೆಸರಲ್ಲಿ ಸಿಮ್‌ ಕಾರ್ಡ್‌ ಖರೀದಿಸಿ, ಆತನಿಗೆ ಕರೆ ಮಾಡತೊಡಗಿದರು. ಆಕೆಯ ಪೂರ್ವಾಪರ ಪರಿಶೀಲಿಸಿದ ಆತ ಆಕೆಗೆ ಮತ್ತೆ ಕರೆ ಮಾಡಲು ಆರಂಭಿಸಿದ. ಕೊನೆಗೆ ದೇವಸ್ಥಾನದಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿಬಿಟ್ಟರು. ಆತ ದೇವಸ್ಥಾನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Comments are closed.