ರಾಷ್ಟ್ರೀಯ

ಆರ್ಟಿಕಲ್ 370 ರದ್ದು ಹಿನ್ನೆಲೆ ಟೆಲಿಕಾಂ ಸಂಸ್ಥೆಗಳಿಗೆ ಬಾರಿ ನಷ್ಟ

Pinterest LinkedIn Tumblr

ಟೆಲಿಕಾಂ ಕ್ಷೇತ್ರದ ದೈತ್ಯ ಏರ್ ಟೆಲ್ ಸಂಸ್ಥೆ ಜಮ್ಮು-ಕಾಶ್ಮೀರದಲ್ಲಿ ತಾತ್ಕಾಲಿಕವಾಗಿ ಬರೊಬ್ಬರಿ 30 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧದಿಂದಾಗಿ ಈ ಪ್ರಾಂತ್ಯದಲ್ಲಿ ಟೆಲಿಕಾಂ ಸಂಸ್ಥೆಗಳು ನಷ್ಟ ಎದುರಿಸಿವೆ.

ಐಸಿಐಸಿಐ ಸೆಕ್ಯುರಿಟೀಸ್ ವರದಿಯ ಪ್ರಕಾರ ಏರ್ ಟೆಲ್ ಮಾತ್ರವಲ್ಲದೇ ವೋಡಾಫೋನ್ ಸಂಸ್ಥೆಗಳೂ ಸಹ ನಷ್ಟ ಎದುರಿಸಿವೆ. ಜಮ್ಮು-ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸದಾಗಿ ರಚನೆಯಾಗಿರುವ ಕೇಂದ್ರಾಡಳಿತ ಪ್ರದೇಶದಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಳೀಯ ಆಡಳಿತದ ಶಿಫಾರಸ್ಸಿನ ಆಧಾರದಲ್ಲಿ ಪುನಾರಂಭ ಮಾಡಲಾಗುತ್ತದೆ ಎಂದು ಹೇಳಿದ್ದರು.

ಒಮ್ಮೆ ಅಂತರ್ಜಾಲ ಸೇವೆಗಳು ಪುನಾರಂಭಗೊಂಡಲ್ಲಿ ಏರ್ ಟೆಲ್ ತಾತ್ಕಾಲಿಕವಾಗಿ ಕಳೆದುಕೊಂಡಿರುವ 25-30 ಲಕ್ಷ ಗ್ರಾಹಕರನ್ನು ಪುನಃ ಪಡೆಯಲಿದೆ.

Comments are closed.