ಕರ್ನಾಟಕ

ಕೆರೆ ಕೋಡಿ ಒಡೆದ್ದು ಸುತ್ತಲಿನ ಜನವಸತಿ ರಸ್ತೆ ಸಂಪೂರ್ಣ ಜಲಾವೃತ.

Pinterest LinkedIn Tumblr

ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದಿದ್ದು ಅಪಾರ ಪ್ರಮಾಣದ ಸುತ್ತಲಿನ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಕೆರೆಯನ್ನು ಅಭಿವೃದ್ಧಿ ಕಾರ್ಯವನ್ನು ಬಿಡಿಎ ವಹಿಸಿಕೊಂಡಿದ್ದು, ಭಾನುವಾರ ಕೆರೆಯ ಕಟ್ಟೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು. ಕೆರೆಯನ್ನು ಸ್ವಚ್ಚಗೊಳಿಸಲು ನೀರು ಸ್ವಲ್ಪ ಹರಿಯುವಂತೆ ಮಾಡಲಾಗಿತ್ತು. ಅದೇ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ.

ಕೆರೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಕೆಳಭಾಗದ ವೈಶ್ಯ ಬ್ಯಾಂಕ್ ಕಾಲೋನಿ, ಕೃಷ್ಣ ಲೇಔಟ್, ಶಾಂತಿನಿಕೇತನ, ಅವನಿ ಶೃಂಗೇರಿ ನಗರ, ಸರಸ್ವತಿಪುರ, ವಿಜಯಬ್ಯಾಂಕ್ ಲೇಔಟ್, ದಿಯೋ ಲೇಔಟ್, ರಾಘವೇಂದ್ರ ನಗರ, ಸಾಯಿಬಾಬಾ ದೇವಾಲಯ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕಟ್ಟಡಗಳ ನೆಲಮಹಡಿಗಳಲ್ಲಿ ನಿಲ್ಲಿಸಿದ್ದ ಕಾರುಗಳು, ಬೈಕ್​ಗಳು ನೀರಿನಲ್ಲಿ ಮುಳುಗಿವೆ. ಕೆರೆ ಕೆಳಭಾಗದ ಕೊಳಗೇರಿ ಸಂರ್ಪೂರ್ಣ ನೀರಿನಿಂದ ಆವೃತವಾಗಿದೆ.

ಅನಾಹುತಕ್ಕೆ ಬಿಡಿಎ ಕಾರಣ: ಕೆರೆಯ ಕೋಡಿ ಒಡೆಯಲು ಬಿಡಿಎ ಅಭಿವೃದ್ಧಿ ಕಾಮಗಾರಿಗಳೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.ಕೆರೆ ಕೊಡಿ ಒಡೆಯುವ ಮಾಹಿತಿ ಬಿಡಿಎ ಅಧಿಕಾರಿಗಳಿದ್ದರೂ ಸ್ಥಳೀಯರಿಗೆ ಮಾಹಿತಿ ನೀಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆರೆಯ ಕಟ್ಟೆ ಸುಮಾರು 25 ಅಡಿಗೂ ಹೆಚ್ಚು ಅಗಲವಾಗಿ ಒಡೆದಿದೆ.

ನ್ಯಾನಪ್ಪನಹಳ್ಳಿ – ಹುಳಿಮಾವು ಸಂಪರ್ಕ ಕಡಿತ: ಮಧ್ಯಾಹ್ನ 2 ಗಂಟೆಯಿಂದ ರಭಸವಾಗಿ ಹರಿಯುತ್ತಿರುವ ನೀರು ಇನ್ನೂ ಹರಿಯುತ್ತಿದೆ. ಇದರಿಂದ ನ್ಯಾಯಪ್ಪನ ಹಳ್ಳಿ ಮತ್ತು ಹುಳಿಮಾವು ನಡುವಿನ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ರಾಜಕಾಲುವೆಯಲ್ಲಿ ಹೂಳು ತುಂಬಿ ನೀರಿನ ಸರಾಗ ಹರಿವಿಗೆ ಅಡ್ಡಿಯುಂಟಾಗಿದೆ.

Comments are closed.