ನವದೆಹಲಿ: ಸೆಪ್ಟಂಬರ್ 01ರಿಂದ ಜಾರಿಗೆ ಬಂದಿದ್ದ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ದೇಶಾದ್ಯಂತ ಒಟ್ಟಾರೆ 577 ಕೋಟಿ ರೂಪಾಯಿಗಳಷ್ಟು ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಗೆ ಈ ಕುರಿತಾದ ಲಿಖಿತ ಮಾಹಿತಿಯನ್ನು ನೀಡಿದ್ದಾರೆ. 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚಾರಿ ಪೊಲೀಸರು ಒಟ್ಟು 38 ಲಕ್ಷ ಚಲನ್ ಗಳನ್ನು ನೀಡಿದ್ದಾರೆ ಎಂಬ ಮಾಹಿತಿಯನ್ನೂ ಸಚಿವರು ಲೋಕಸಭೆಯಲ್ಲಿ ನೀಡಿದ್ದಾರೆ.
ಚಂಢಿಗಢ, ಪುದುಚೇರಿ, ಅಸ್ಸಾಂ, ಛತ್ತೀಸ್ ಗಢ, ಉತ್ತರ ಪ್ರದೇಶ, ಒಡಿಸ್ಸಾ, ದೆಹಲಿ, ರಾಜಸ್ಥಾನ, ಬಿಹಾರ್, ದಾದ್ರಾ ನಗರ ಹವೇಲಿ, ಪಂಜಾಬ್, ಗೋವಾ, ಉತ್ತರಾಖಂಡ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಹರ್ಯಾಣಗಳಿಂದ ಲಭ್ಯವಾಗಿರುವ ದತ್ತಾಂಶಗಳ ಆಧಾರದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ನಿಖರವಾಗಿ ಹೇಳುವುದಾದರೆ 38,39,406 ಚಲನ್ ಗಳನ್ನು ವಾಹನ ಸವಾರರಿಗೆ ನೀಡಲಾಗಿದೆ ಮತ್ತು ಇದರಿಂದ ಒಟ್ಟಾರೆ 5,77,51,79,895 ರೂಪಾಯಿಗಳಷ್ಟು ದಂಡ ಸಂಗ್ರಹಗೊಂಡಿದೆ. ತಮಿಳುನಾಡು ರಾಜ್ಯದಲ್ಲಿ ಅತೀ ಹೆಚ್ಚಿನ ಅಂದರೆ 14,13,996 ಚಲನ್ ನೀಡಲ್ಪಟ್ಟಿದ್ದರೆ ಕಡಿಮೆ ಪ್ರಮಾಣದ ಚಲನ್ ಗೋವಾ ರಾಜ್ಯದಲ್ಲಿ ನೀಡಲ್ಪಟ್ಟಿದೆ. ಗೋವಾದಲ್ಲಿ 58 ಚಲನ್ ಗಳನ್ನು ಮಾತ್ರವೇ ನೀಡಲಾಗಿದೆ.
ಈ ಖತರ್ನಾಕ್ ಗ್ಯಾಂಗ್ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.