
ಹಾಸನ (ನ.16): ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಅನರ್ಹಗೊಂಡ ಶಿವಾಜಿನಗರ ಶಾಸಕ ರೋಷನ್ ಬೇಗ್ ಬಿಜೆಪಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕಮಲ ಪಾಳೆಯ ಸೇರುವ ಉಮೇದಿನಲ್ಲಿದ್ದ ಅವರ ಆಸೆಗೆ ಪಕ್ಷದ ನಾಯಕರು ತಣ್ಣೀರೆರಚಿದ್ದರಿಂದ ಡೋಲಾಯಮಾನ ಸ್ಥಿತಿಯಲ್ಲಿರುವ ಅವರು ಕಡೆಯ ಪ್ರಯತ್ನವಾಗಿ ಜೆಡಿಎಸ್ ಬಾಗಿಲು ತಟ್ಟಲು ಹರಸಾಹಸ ನಡೆಸುತ್ತಿದ್ದಾರೆ.
ಐಎಂಎ ಪ್ರಕರಣ ಉರುಳಾಗಿರುವ ಹಿನ್ನೆಲೆ ಬೇಗ್ ಸೇರ್ಪಡನೆಗೆ ಪಕ್ಷದ ನಾಯಕರು ವಿರೋಧಿಸಿದ್ದಾರೆ. ಈ ಹಿನ್ನೆಲೆ ಅವರು ಈಗ ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಈ ಹಿನ್ನೆಲೆ ತೆನೆ ಹೊರಲು ಪ್ರಯತ್ನಿಸುತ್ತಿರುವ ಅವರು ಜೆಡಿಎಸ್ ನಾಯಕರ ಭೇಟಿಗಾಗಿ ಕಾದು ಕುಳಿತಿದ್ದಾರೆ.
ಈಗಾಗಲೇ ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡುವ ಯತ್ನ ನಡೆಸಿದರೂ, ದೇವೇಗೌಡರು ಮಾತ್ರ ಅವರ ಭೇಟಿಗೆ ಸಮ ನೀಡುತ್ತಿಲ್ಲ. ದೇವೇಗೌಡರು ಸಿಗದ ಹಿನ್ನೆಲೆ ಎಚ್ಡಿ ಕುಮಾರಸ್ವಾಮಿ ಅವರ ಮೂಲಕ ಮಾತುಕತೆ ನಡೆಸಲು ಯತ್ನಿಸಿದರೂ ಅದು ಪ್ರಯೋಜನವಾಗಿಲ್ಲ. ಮೂಲಗಳ ಪ್ರಕಾರ ಕುಮಾರಸ್ವಾಮಿ ಬೇಗ್ ಭೇಟಿಗೆ ಅವಕಾಶ ನೀಡಲು ವಿರೋಧಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಇಬ್ಬರು ನಾಯಕರು ಕೈ ಬಿಟ್ಟ ಹಿನ್ನೆಲೆ ಈಗ ರೇವಣ್ಣರನ್ನು ಭೇಟಿಯಾಗುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಅಜ್ಞಾತ ಸ್ಥಳಕ್ಕೆ ತೆರಳಿರುವ ಅವರ ಸಧ್ಯ ಹಾಸನದಲ್ಲಿದ್ದಾರೆ. ರೇವಣ್ಣ ಅವರ ಮೂಲಕ ಪಕ್ಷಕ್ಕೆ ಸೇರಿ ರಾಜಕೀಯ ಜೀವನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎನ್ನಲಾಗಿದೆ.
ಎಚ್.ಡಿ ರೇವಣ್ಣ ಜೊತೆ ಬೇಗ್ ಉತ್ತಮ ಸಂಬಂಧ ಹೊಂದಿರುವ ಹಿನ್ನೆಲೆ ಅವರಿಗೆ ಉಳಿದಿರುವ ಕೊನೆಯ ಅವಕಾಶ ಅವರಾಗಿದ್ದಾರೆ. ಈ ಹಿನ್ನೆಲೆ ರೇವಣ್ಣ ಮೂಲಕ ಮಾತುಕತೆಗೆ ಅವರ ನಡೆಸಲು ಹಾತೊರೆಯುತ್ತಿದ್ದಾರೆ.
ಹುಣಸೂರಿನಲ್ಲಿರುವ ರೇವಣ್ಣ ಹೊಳೆನರಸೀಪುರಕ್ಕೆ ಆಗಮಿಸಲಿದ್ದು, ಅವರಿಗಾಗಿ ಬೇಗ್ ಕಾದು ಕುಳಿತಿದ್ದಾರೆ ಎನ್ನಲಾಗಿದೆ. ಅವರು ಬಂದ ಕೂಡ ಅವರು ಅವಕಾಶ ನೀಡಿದರೆ ರೇವಣ್ಣ ಮನವೊಲಿಸಿ ಬಳಿಕ ವರಿಷ್ಠರನ್ನು ಭೇಟಿಯಾಗುವ ಇರಾದೆ ಬೇಗ್ ಅವರದು ಎಂಬ ಮಾತು ಕೇಳಿ ಬಂದಿದೆ.
ಐಎಂಐ ಹಗರಣದ ಪ್ರಮುಖ ಆರೋಪಿ ಬೇಗ್ ಆಗಿದ್ದು, ಈ ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿದೆ. ಇದೇ ಪ್ರಕರಣ ಎಚ್ಡಿ ಕುಮಾರಸ್ವಾಮಿಗೂ ಉರುಳಾಗಿದ್ದು, ಬೇಗ್ ಪಕ್ಷಕ್ಕೆ ಸೇರಲು ಅವರು ಸಮ್ಮತಿಸುವುದು ಅನುಮಾನ ಎಂಬ ಮಾತು ಕೂಡ ಕೇಳಿ ಬಂದಿದೆ.
Comments are closed.