ರಾಷ್ಟ್ರೀಯ

ಅಸಭ್ಯವಾಗಿ ವರ್ತನೆ ಮಾಡಿದ್ದ ವಿಮಾನ ಸಿಬ್ಬಂದಿ ಅಮಾನತು

Pinterest LinkedIn Tumblr


ಹೊಸದಿಲ್ಲಿ: ದಿಲ್ಲಿ-ಕೋಲ್ಕೊತಾ ಮಾರ್ಗದ ಸ್ಪೈಸ್‌ಜೆಟ್‌ ವಿಮಾನದಲ್ಲಿ  ಪ್ರಯಾಣಿಕರ ಎದುರೇ ಅಸಭ್ಯವಾಗಿ ವರ್ತನೆ ಮಾಡಿದ ಹೆಚ್ಚುವರಿ ಪೈಲಟ್‌ ಹಾಗೂ ಗಗನಸಖಿಯನ್ನು ಅಮಾನತು ಮಾಡಲಾಗಿದೆ.

ಕಳೆದ ತಿಂಗಳು ನಡೆದ ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ಬಳಿಕ ವಿಮಾನಯಾನ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಸಮವಸ್ತ್ರ ಧರಿಸಿದ್ದ ಗಗನಸಖಿ ಹಾಗೂ ಹೆಚ್ಚುವರಿ ಕರ್ತವ್ಯದ ಮೇಲೆ ವಿಮಾನ ಏರಿದ ಪೈಲಟ್‌ ಹಿಂಬದಿ ಸೀಟಿನ ಲ್ಲಿಕುಳಿತು ಅಶ್ಲೀಲವಾಗಿ ನಡೆದುಕೊಂಡಿದ್ದರು. ಈ ದೃಶ್ಯವು ಪ್ರಯಾಣಿಕರನ್ನು ತೀವ್ರ ಕಸಿವಿಸಿಗೆ ಗುರಿ ಮಾಡಿತ್ತು. ಬಳಿಕ ಪ್ರಯಾಣಿಕರು ಈ ಬಗ್ಗೆ ದೂರು ದಾಖಲಿಸಿದ್ದರು. ಘಟನೆ ಬಳಿಕ ಇಬ್ಬರೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖೆ ವೇಳೆ ಅವರು ತಪ್ಪಿತಸ್ಥರೆಂದು ಸಾಬೀತಾಗಿತ್ತು.

Comments are closed.